Featured Post
ಖಾಸಗಿ ಶಿಕ್ಷಣ ಸಂಸ್ಥೆಗಳ ಮ್ಯಾನೇಜ್ಮೆಂಟ್ ಮೇಲೆ ಗರಂ ಅದಾ ಶಿಕ್ಷಣ ಸಚಿವ, ಕ್ರಮ ಕೈ ಗೊಳ್ಳಲು ಶೀಘ್ರದಲ್ಲೇ ನೋಟೀಸ್ ಜಾರಿ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಬೆಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಆನ್ ಲೈನ್ ಶಿಕ್ಷಣದ ಹೆಸರಿನಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳು ಶೋಷಣೆ ಮಾಡುವುದನ್ನು ಸಹಿಸುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಆನ್‍ಲೈನ್ ಮೂಲಕ ಶಿಕ್ಷಣದ ಅವಶ್ಯಕತೆ ಇಲ್ಲದಿರುವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳಿಗೂ ಸಹ ಆನ್‍ಲೈನ್ ಮೂಲಕ ಶಿಕ್ಷಣ ನೀಡುತ್ತೇವೆಂದು ಕೆಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಶೋಷಿಸುತ್ತಿರುವುದು ತಿಳಿದುಬಂದಿದೆ.
ಆನ್ಲೈನ್ ತರಗತಿಗಳನ್ನು ದಿನವಿಡೀ ಯಾವುದೇ ಮುಂಜಾಗ್ರತೆ ಇಲ್ಲದೆ ತೆಗೆದು ಕೊಳ್ಳುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ.
ಆನ್ಲೈನ್ ತರಗತಿಗಾಗಿ ಮಕ್ಕಳಿಗೆ ಹಾಗೂ ಪೋಷಕರಿಗೆ ಮಾಡುತ್ತಿರುವ ಶೋಷಣೆ ಸಹಿಸುವುದಿಲ್ಲ ಎಂದು ಸುರೇಶ ಕುಮಾರ ಹೇಳಿದ್ದಾರೆ.
ತಾಂತ್ರಿಕ ಉಪಕರಣಗಳನ್ನು ಉಪಯೋಗಿಸುವಾಗ ಅದಕೆ ಬೇಕಾದ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ನಡೆಸಬೇಕಾಗುತ್ತೆ, ಇದ್ರಲ್ಲಿ ಮಕ್ಕಳ ಅರೋಗ್ಯ ಹಾಗೂ ಮಾನಸಿಕ ಒತ್ತಡ ಬೀಳದ ರೀತಿಯಲ್ಲಿ ನಿಭಾಯಿಸಬೇಕಾಗುತ್ತೆ.
ಮಕ್ಕಳ ಅರೋಗ್ಯಕ್ಕೆ ಜಾಸ್ತಿ ಒತ್ತು ನೀಡಿ, ಅವರಿಗೆ ಭಾರ ಆಗದ ರೀತಿಲಿ ಪಾಠ ಮಾಡುವ ಅಂಶ ಗಮನದಲ್ಲಿಟ್ಟು ಕೊಂಡು ಮುಂದುವರಿಯಬೇಕು ಅಂತಾ ಖಾಸಗಿ ಶಿಕ್ಷಣ ಸಂಸ್ಥೆ ಗಳಿಗೆ ಹೇಳಿದ್ದಾರೆ.
ಇದಲ್ಲದೆ ಸ್ಕೂಲ್ ಫೀ ಗಾಗಿ ಪೋಷಕರ ಮೇಲೆ ಒತ್ತಡ ಹೇರುವುದು ಬೇಡ ಹಾಗೂ ಪ್ರಸ್ತಕ ವರ್ಷದ ಫೀ ಹೆಚ್ಚಿಗೆ ಮಾಡಬೇಡಿ ಅಂತಾ ಶಿಕ್ಷಣ ಸಂಸ್ಥೆಗಳಿಗೆ ಆದೇಶ ಹೊರಡಿಸಿದೆ.
ಬಹಳಷ್ಟು ಖಾಸಗಿ ಸಂಸ್ಥೆಗಳು, ಬೇಕಾಬಿಟ್ಟಿ ದಿನವಿಡೀ ಆನ್ಲೈನ್ ತರಗತಿಗಳನ್ನು ತೆಗೆದುಕೊಂಡು ಮಕ್ಕಳ ಹಾಗೂ ಪೋಷಕರ ಮೇಲೆ ಮಾಡುತ್ತಿರುವ ಶೋಷಣೆ ನಾನು ಸಹಿಸುವುದಿಲ್ಲ ಇದಕೆ ಕಟ್ಟುನಿಟ್ಟಾದ ನೋಟೀಸ್ ಜಾರಿಗೆ ತರಲು ಶಿಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ