Featured Post

BIG NEWS: 'SSLC, PUC ಪರೀಕ್ಷಾ ಅಕ್ರಮ'ದಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದಿ ವಿರುದ್ಧ 'ಕ್ರಿಮನಲ್ ಕೇಸ್': ರಾಜ್ಯ ಸರ್ಕಾರ ಆದೇಶ

SSLC, ದ್ವಿತೀಯ ಪಿಯುಸಿ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಲು ಮತ್ತು ಇಲಾಖಾ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸಂಬಂಧ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ನಿರ್ದೇಶಕರು (ಪರೀಕ್ಷೆಗಳು), ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮ೦ಡಳಿ, ಮಲ್ಲೇಶ್ವರಂ, ಬೆಂಗಳೂರು ಸಂಖ್ಯೆ:ಎ8/ಎಸ್‌ಎಸ್‌ಎಲ್ಸಿ/ಅಕ್ರಮ/44/2019-20ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಒಂದು ಅತ್ಯಂತ ಪ್ರಮುಖ ಘಟ್ಟವಾಗಿರುತ್ತದೆ. ಸದರಿ ಪರೀಕ್ಷೆಯನ್ನು ಯಾವುದೇ ಅವ್ಯವಹಾರ ಆಗದಂತೆ ಪಾರದರ್ಶಕವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಮಂಡಳಿಯು ಎಲ್ಲಾ ರೀತಿಯ ಅಗತ್ಯ ಪೂರ್ವಸಿದ್ಧತೆಗಳೊಂದಿಗೆ ಪರೀಕ್ಷೆಯನ್ನು ನಡೆಸಲು ಕ್ರಮಕೈಗೊಳ್ಳುತ್ತದೆ. ಏತನ್ಮಧ್ಯೆ. ಕೆಲವು ಕಿಡಿಗೇಡಿಗಳು ಪರೀಕ್ಷಾ ಸಮಯದಲ್ಲಿ ಪ್ರಶ್ನೆಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು, ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಲು ಪ್ರಯತ್ನಪಡುವುದು ಈ ತರಹದ ಕಾನೂನು ಬಾಹಿರ ಕೃತ್ಯಗಳನ್ನು ನಡೆಸಲು ಪ್ರಯತ್ನಿಸುವ ಮೂಲಕ ವಿದ್ಯಾರ್ಥಿ/ಪೋಷಕರಲ್ಲಿ ಗೊಂದಲವುಂಟುಮಾಡುವುದು ಮತ್ತು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವುದು ಇವರ ಉದ್ದೇಶವಾಗಿರುತ್ತದೆ. ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಇಲಾಖೆಯು ಅತ್ಯಂತ ಗಂಭೀರವಾಗಿ ಪರಿ...

ನಿತ್ಯಭವಿಷ್ಯ |ಭವಿಷ್ಯ ವಾಣಿ |27 ಜೂನ್ 2020

ಭವಿಷ್ಯವಾಣಿ 
ನಿತ್ಯಭವಿಷ್ಯ : 27-06-2020


ಮೇಷರಾಶಿ.
ಎಡುರು ತೊಡರುಗಳಿದ್ದರೂ ಹಂತ ಹಂತವಾಗಿ ನವಚೈತನ್ಯ ಅನುಭವಕ್ಕೆ ಬರಲಿದೆ. ಅಧಿಕಾರಿ – ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮನೆಯಲ್ಲಿ ಅತಿಥಿ ಅಭ್ಯಾಗತರ ಆಗಮನವು ಸಂತಸ ತಂದೀತು. ಕೃಷಿ ಚಟುವಟಿಕೆಗಳಿಂದ ಸಮಸ್ಯೆ, ಶತ್ರುಗಳ ನಾಶ, ಕೋರ್ಟ್ ಕೇಸ್‍ಗಳಲ್ಲಿ ಜಯದ ಸೂಚನೆ. ಆತ್ಮಸ್ಥೆರ್ಯದಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ಮೂಡಲಿದೆ.

ವೃಷಭರಾಶಿ
ದೈವಾನುಗ್ರಹದ ಪ್ರಭಾವದಿಂದ ವ್ಯಾಪಾರ, ವ್ಯವಹಾರಗಳು ಸುಸ್ಥಿತಿಯಲ್ಲಿ ಮುಂದುವರಿಯಲಿವೆ. ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ಕಿರಿಯ ಸಹೋದರಿಯಿಂದ ಅನುಕೂಲ, ಉನ್ನತ ಅಧಿಕಾರಿಗಳ ಭೇಟಿ, ರಾಜಕೀಯ ವ್ಯಕ್ತಿಗಳೊಂದಿಗೆ ಮಾತುಕತೆ, ಶುಭ ಫಲ ಯೋಗ ಪ್ರಾಪ್ತಿ. ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ಧಿ ತೋರಿ ಬರಲಿದೆ. ಅನಿಷ್ಟಗಳನ್ನು ಎದುರಿಸುವ ಭೀತಿ ನಿಮ್ಮಲ್ಲಿದ್ದು ಮುನ್ನಡೆ ಸಾಧಿಸಲಿದ್ದೀರಿ.


 
ಮಿಥುನರಾಶಿ
ಅವಿರತ ಚಟುವಟಿಕೆಗಳು ದೇಹಾರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆ ವಹಿಸಿರಿ. ಉದ್ಯೋಗ-ಸ್ಥಳ ಬದಲಾವಣೆ, ಗೃಹ ಬದಲಾವಣೆಗೆ ಆಲೋಚನೆ, ನಾನಾ ರೀತಿ ಚಿಂತೆ, ಅಧಿಕಾಯುತ ಮಾತುಗಳನ್ನಾಡುವಿರಿ, ಕುಟುಂಬಸ್ಥರಿಗೆ ನೆರವು, ಆಕಸ್ಮಿಕ ಧನಾಗಮನ. ನ್ಯಾಯಾಲಯದ ವಾದ, ವಿವಾದಗಳು ಸದ್ಯಕ್ಕೆ ಮುಕ್ತಾಯ ಗೊಳ್ಳುವ ಲಕ್ಷಣ ಕಂಡುಬಾರದು. ಆದಕಾರಣ ಎಲ್ಲಾ ವಿಚಾರದಲ್ಲಿ ಜಾಗ್ರತೆ ಇರಲಿ.

ಜಾಹಿರಾತು :


🌷🌷ಪ್ರೀತಿಯಲ್ಲಿ ನಂಬಿ ಮೋಸ ,ವಿದ್ಯಾಭ್ಯಾಸ ತೊಂದರೆ ,ಆರೋಗ್ಯ ಅಭಿವೃದ್ಧಿ, ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ ,ಕೊಟ್ಟ ಹಣ ಮರಳಿ ಬರಲು, ಗಂಡ ಹೆಂಡತಿ ಸಮಸ್ಯೆ ,ಇನ್ನೂ ನಿಮ್ಮ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ತಕ್ಷಣ ಕರೆಮಾಡಿ +91 9611782270🙏
 

ಕಟಕರಾಶಿ
ಈವಾರ ಕೊಂಚ ಆರ್ಥಿಕವಾಗಿ ಹಾಗೂ ಆಶಾದಾಯಕವಾಗಿ ಮುಂದುವರಿಯಲು ಸಾಧಕವಾಗಲಿದೆ. ಸ್ವಂತ ಉದ್ಯಮ ವ್ಯಾಪಾರದಲ್ಲಿ ಲಾಭ, ವ್ಯವಹಾರದಲ್ಲಿ ಧನಾಗಮನ, ಅನಗತ್ಯ ತಿರುಗಾಟ, ಮೊಂಡು ಧೈರ್ಯ, ಶೌರ್ಯ ಪ್ರದರ್ಶನ, ದಿನಾಂತ್ಯದಲ್ಲಿ ಅಶಾಂತಿ ವಾತಾವರಣ. ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರಿಗೆ ನಿರೀಕ್ಷಿತ ಕಾರ್ಯ  ಸಾಧನೆಗೆ ಅನುಕೂಲವಾಗಲಿದೆ. ನಿರುದ್ಯೋಗಿಗಳಿಗೆ ಸಿಹಿಸುದ್ದಿ.


 
ಸಿಂಹರಾಶಿ
ಕಾರ್ಯಕ್ಷೇತ್ರದಲ್ಲಿ ಚೇತರಿಕೆಯ ದಿನವಾಗಿ ತೋರಿಬರಲಿದೆ. ಆದಾಯ-ನಷ್ಟ ಸಮ ಪ್ರಮಾಣ, ಕೀರ್ತಿ, ಗೌರವ ಸಂಪಾದನೆ, ಸಾಧಿಸುವ ಹಂಬಲ, ಕೆಲಸ ಕಾರ್ಯದಲ್ಲಿ ಅಧಿಕ ಒತ್ತಡ, ಒತ್ತಡದಿಂದ ನಿದ್ರಾಭಂಗ, ನಷ್ಟ ಪ್ರಮಾಣ ಅಧಿಕವಾಗುವುದು. ಆದಕಾರಣ ಕಾಲೋಚಿತವಾದ ನೇರ ನುಡಿಯು ನಿಮ್ಮ ಗಮನದಲ್ಲಿರಿಸಿರಿ. ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ ಗೋಚರಕ್ಕೆ ಬಂದೀತು. ಆಭಿವೃದ್ಧಿ ಇದೆ.

ಕನ್ಯಾರಾಶಿ
ಹಿತಶತ್ರುಗಳ ಉಪಟಳದಿಂದ ಕಾರ್ಯ ರಂಗ  ದಲ್ಲಿ ಭಯದ ವಾತಾವರಣ ನಿಮ್ಮನ್ನು ಬಾಧಿಸಲಿದೆ. ಸ್ನೇಹಿತರಿಂದ ಒತ್ತಡಕ್ಕೆ ಸಿಲುಕುವಿರಿ, ಉದ್ಯೋಗದಲ್ಲಿ ಒತ್ತಡ, ಯೋಚನೆಯಿಂದ ನಿದ್ರಾಭಂಗ, ನಷ್ಟ ಪ್ರಮಾಣ ಅಧಿಕ, ರಾಜಕೀಯ ವ್ಯಕ್ತಿಗಳಿಂದ ಕಿರಿಕಿರಿ, ಅಹಂಭಾವದ ನಡವಳಿಕೆಯಿಂದ ಸಂಕಷ್ಟ. ಇದರಿಂದ ಕಾರ್ಯಸಾಧನೆ ಏನೆಂಬುದನ್ನು ನೆನೆಪಿಸಿ ಕೊಡಬೇಕಾದೀತು. ಸಾಂಸಾರಿಕವಾಗಿ ನೆಮ್ಮದಿಯ ವಾತಾವರಣವು ಇರದು.


 

ತುಲಾರಾಶಿ
ಕಾರ್ಯರಂಗದಲ್ಲಿ ದುಡಿಮೆ ಹೆಚ್ಚಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಆರ್ಥಿಕ ಸಹಾಯ ಲಭಿಸುವುದಿಲ್ಲ, ಲಾಭ ಪ್ರಮಾಣ ಕುಂಠಿತ, ಅದೃಷ್ಟ ವಂಚಿತರೆಂಬ ಭಾವನೆ ಕಾಡುವುದು. ಆರ್ಥಿಕವಾಗಿ ಏರಿಳಿತಗಳು ಕಂಡು ಬಂದು ಕಾರ್ಯಸಾಧನೆಗೆ ಅಡ್ಡಿಯಾಗಲಿವೆ. ಖರ್ಚುವೆಚ್ಚಗಳಲ್ಲಿ ಹಿಡಿತ ಸಾಧಿಸುವುದು ಅಗತ್ ಯ.

ವೃಶ್ಚಿಕರಾಶಿ
ಆರ್ಥಿಕ ಸ್ಥಿತಿಯು ನಾನಾ ರೀತಿಯಲ್ಲಿ ಸುಧಾರಿಸುವುದರಿಂದ ಋಣಬಾಧೆಯಿಂದ ಮುಕ್ತರಾಗುವ ಸಮಯವಿದು. ಸರಕಾರಿ ಕಾರ್ಯಸಿದ್ಧಿಯಾಗಿ ಸಂತಸ ತಂದೀತು. ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ನಿಮ್ಮ ಕೆಲಸಕ್ಕೆ ಪ್ರಶಂಸೆ ಲಭಿಸುವುದು, ಪ್ರಯಾಣದಿಂದ ನೆಮ್ಮದಿ, ದೇವರ ಆರಾಧನೆಯಿಂದ ಅನುಕೂಲ, ಮಿತ್ರರಿಂದ ಅದೃಷ್ಟ ಒಲಿಯುವುದು, ಗೌರವ, ಕೀರ್ತಿ ಪ್ರತಿಷ್ಠೆ ಲಭಿಸುವುದು. ಗೃಹದಲ್ಲಿ ಆಪ್ತೇಷ್ಠರ ಭೇಟಿ, ಸತ್ಕಾರಾದಿಗಳಿರುತ್ತವೆ.
[6/27, 7:46 AM] Myself: ಧನುರಾಶಿ
ಆರ್ಥಿಕವಾಗಿ ಅದೃಷ್ಟಾನುಕೂಲವಿದೆ. ಅನಿರೀಕ್ಷಿತ ಗಣ್ಯರ ಭೇಟಿ, ಪೂರ್ವಿಕರ ಕಾರ್ಯಗಳಲ್ಲಿ ತೊಡಗುವಿರಿ, ಪ್ರಯಾಣದಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ಉದ್ಯೋಗ ಸಮಸ್ಯೆ ಹೆಚ್ಚಾಗುವುದು, ಮನಸ್ಸಿನಲ್ಲಿ ಆತಂಕ, ಆಕಸ್ಮಿಕ ತೊಂದರೆ ಎದುರಾಗುವುದು. ಉದ್ಯೋಗಿಗಳಿಗೆ ವರ್ಗಾವಣೆ ತೋರಿ ಬಂದೀತು. ಶುಭಮಂಗಲ ಕಾರ್ಯಗಳು ನಿಮ್ಮಿಚ್ಛೆಯಂತೆ ನಡೆದು ನಿಮ್ಮ ಮನಸ್ಸು ಸಂತೃಪ್ತಿಗೊಳಲಿದೆ. ಆರೋಗ್ಯದಲ್ಲಿ ಗಮನವಿರಲಿ.

ಮಕರರಾಶಿ
ನಿಶ್ಚಿತ ಗುರಿಯತ್ತ ಸಾಗುವಲ್ಲಿ ಅನೇಕ ಅಡಚಣೆಗಳು ಕಂಡು ಬಂದರೂ ನಿಮ್ಮ ಪ್ರಯತ್ನಬಲದ ಕ್ರಿಯಾಶಕ್ತಿಯಿಂದ ನಿಮ್ಮಿಚ್ಛೆಯಂತೆ ಎಲ್ಲವೂ ನಡೆಯಲಿದೆ. ಸಂಗಾತಿಯೊಂದಿಗೆ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ದಾಂಪತ್ಯದಲ್ಲಿ ಕಿರಿಕಿರಿ, ವಿಚ್ಛೇದನಕ್ಕಾಗಿ ಓಡಾಟ, ನೆಮ್ಮದಿಗೆ ಭಂಗ, ಜೀವನ ನಿರ್ವಹಣೆಗೆ ಪರಿಶ್ರಮ, ಮಾನಸಿಕ ಒತ್ತಡ. ಆರೋಗ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು.
[6/27, 7:49 AM] Myself: ಕುಂಭರಾಶಿ
ವೃತ್ತಿರಂಗದಲ್ಲಿರಲೀ, ಕುಟುಂಬದಲ್ಲಿರಲೀ, ಹೊಂದಾಣಿಕೆಯು ಮುನ್ನಡೆಗೆ ಸಾಧಕವಾಗಲಿದೆ. ಆರೋಗ್ಯ ವಿಚಾರದಲ್ಲಿ ಆತಂಕ ಸೃಷ್ಠಿ, ಕಣ್ಣಿಗೆ ಪೆಟ್ಟಾಗುವ ಸಾಧ್ಯತೆ ಎಚ್ಚರ, ದ್ರವ ರೂಪದ ವಸ್ತುಗಳಿಂದ ತೊಂದರೆಯಾಗುವ ಸಾಧ್ಯತೆ, ಕೆಲಸದಲ್ಲಿ ಅಧಿಕವಾದ ಒತ್ತಡ, ತೆರಿಗೆ ಕಟ್ಟುವ ವಿಚಾರದಲ್ಲಿ ಸಮಸ್ಯೆ, ಸ್ನೇಹಿತರಿಂದ ಅನಾನುಕೂಲ. ಕೆಲವೊಂದು ಕೆಲಸಗಳು ಅನಿರೀಕ್ಷಿತ ರೀತಿಯಲ್ಲಿ ನಡೆದು ನಿಮಗೆ ಅಚ್ಚರಿ ತಂದೀತು. ಯುವಕರಿಗೆ ವೈವಾಹಿಕ ಯೋಗ ತರಲಿದೆ.

ಮೀನರಾಶಿ
ರಾಹುವಿನಿಂದ ಗ್ರಹಕಾರ್ಯಗಳ ಚಿಂತೆ, ಧರ್ಮಕಾರ್ಯ ವಿಳಂಬವಾಗಲಿದೆ. ಪ್ರೇಮ ವಿಚಾರದಲ್ಲಿ ಸಮಸ್ಯೆ, ಶತ್ರುತ್ವ ಹೆಚ್ಚಾಗುವುದು, ಮಕ್ಕಳೊಂದಿಗೆ ವಾಗ್ವಾದ, ಹಠ-ಅಹಂಭಾವದ ನಡವಳಿಕೆಯಿಂದ ಅಶಾಂತಿ, ಸಾಲ ಬಾಧೆ, ಶತ್ರು ಕಾಟ, ನಷ್ಟ ಪ್ರಮಾಣ ಅಧಿಕ, ಭವಿಷ್ಯದ ಬಗ್ಗೆ ಆತಂಕ. ವೃತ್ತಿರಂಗದಲ್ಲಿ ಕಿರಿಕಿರಿ ನಿಮ್ಮನ್ನು ಬಾದಿಸಿದರೂ ಅನಿರೀಕ್ಷಿತ ರೂಪದಲ್ಲಿ ದೈವಾನುಗ್ರಹದಿಂದ ಸಮಾಧಾನದ ವಾತಾವರಣ ವಿರುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)