SSLC ಪರೀಕ್ಷೆ ವೇಳೆ ನಡೆದ 9 ದುಃಖದ ಸಂಗತಿಗಳು |ಮೊದಲು ದಿನ ಪರೀಕ್ಷೆ ಸುಗಮ |SSLC 2020.
ಕರ್ನಾಟಕ ರಾಜ್ಯದಲ್ಲಿ 10ನೇ ತರಗತಿಯ ಮೊದಲನೆಯ ಪರೀಕ್ಷೆ ನಡೆದಿದ್ದು ಇದರಲ್ಲಿ ಕೆಲವು ದುಃಖದ ಕ್ಷಣಗಳನ್ನು ನಾವು ಹೇಳುತ್ತಿದ್ದೇವೆ.
ಮಗನನ್ನು ಬಿಡಲು ಬಂದ ಶಿಕ್ಷಕನ ಸಾವು
ರಾಯಚೂರು ಜಿಲ್ಲೆಯ ಸುಂಕೇಶ್ವರಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ನಾಗರೆಡ್ಡಿ ಅವರು ತಮ್ಮ ಪುತ್ರ ವಿಶ್ವನಾಥನನ್ನು ಪರೀಕ್ಷಾ ಕೇಂದ್ರಕ್ಕೆ ಬಿಡಲು ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದು ಮೃತಪಟ್ಟಿದ್ದಾರೆ ಅವರು ಮಗನನ್ನು ಗಬ್ಬೂರಿನ ಕೇಂದ್ರದಲ್ಲಿ ಬಿಟ್ಟು ಮಸರಕಲ್ ಗ್ರಾಮದ ಪರೀಕ್ಷಾ ಕೇಂದ್ರಕ್ಕೆ ಕರ್ತವ್ಯಕ್ಕೆ ತೆರಳಬೇಕಿತ್
ತು, ಈ ಘಟನೆಯಲ್ಲಿ ಮಗ ಗಾಯಗೊಂಡಿದ್ದಾನೆ.
ವಿದ್ಯುತ್ ಆಘಾತಕ್ಕೆ ತಂದೆ ಬಲಿ
ಮಗಳು ಪರೀಕ್ಷೆ ಬರೆಯಲು ಹೊರಟ ವೇಳೆ ತಂದೆ ವಿದ್ಯುತ್ ಆಘಾತಕ್ಕೆ ಬಲಿಯಾದ ಘಟನೆ ಬೆಳಗಾವಿ ಜಿಲ್ಲೆಯ ಯಮಕನಮರಡಿ ಯಲ್ಲಿ ನಡೆದಿದೆ. ರಮೇಶ್ ಬಸವಣ್ಣ ಗುರು 43 ವರ್ಷ ಬೆಳಗ್ಗೆ ಹೊಲಕ್ಕೆ ಹೋಗಿದ್ದರು ಅಲ್ಲಿ ಬೋರ್ ವೆಲ್ ಸ್ವಿಚ್ ಆನ್ ಮಾಡಲು ಹೊರಟಾಗ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ SSLC ಪರೀಕ್ಷೆ ಗೆ ಹೋಗಲು ಸಿದ್ಧತೆ ಯಲ್ಲಿದ್ದ ಅಂಜಲಿ, ಪತ್ನಿ ವಿದ್ಯಶ್ರೀ ಸ್ಥಲಕ್ಕೆ ಆಗಮಿಸಿದ್ದಾರೆ.
ಆಗ ಸ್ಥಳೀಯರು ಏನು ಆಗಿಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ನೀನು ಪರೀಕ್ಷೆಗೆ ಹೋಗು ಎಂದು ಕಳುಹಿಸಿದ್ದಾರೆ ಪರೀಕ್ಷೆ ಬರೆದು ಮರಳಿ ಬಂದಾಗ ಈ ಸುದ್ದಿ ಗೊತ್ತಾಯ್ತು.
ಜಾಹಿರಾತು.
ಅಲ್ಲಲ್ಲಿ ಪರೀಕ್ಷೆ ಅಕ್ರಮಕ್ಕೆ ಯತ್ನ
ಕಲಬುರ್ಗಿಯ ಹಳೆಯ ಜೀವರ್ಗಿ ರಸ್ತೆಯ ಪರೀಕ್ಷೆ ಕೇಂದ್ರ ಹಾಗೂ ವಿಜಯ ವಿದ್ಯಾಲಯ ಪರೀಕ್ಷೆ ಕೇಂದ್ರಗಳಲ್ಲಿ ಹಿಂದಿನಿಂದ ಕಾಂಪೌಂಡ್ ಹಾಗೂ ಕಟ್ಟಡಗಳನ್ನು ಏರಿ ಯುವಕರು ಚೀಟಿಗಳನ್ನು ತಲುಪಿಸುತ್ತಿದ್ದರು. ಮಾಧ್ಯಮದವರನ್ನು ಕಂಡು ಪೇರಿ ಹಾಕುತ್ತಿದ್ದರು.
ಡೈಜೆಸ್ಟ್ ಪತ್ತೆ ಮೇಲ್ವಿಚಾರಕರಿಗೆ ಕೋಕ್ :
ರಾಯಚೂರ್ ಪೊಲೀಸ್ ಕಾಲೋನಿಯ ಪರೀಕ್ಷಾ ಕೇಂದ್ರದ ಕೊಠಡಿಯ ಕಿಟಿಕಿಯಲ್ಲಿ ಕಿಟಕಿಯಲ್ಲಿ ಡೈಜೆಸ್ಟ್ ಬಿಟ್ಟಿದ್ದು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಅವರ ಭೇಟಿಯ ವೇಳೆ ತಿಳಿಯಿತು. ಕೆಂಡಮಂಡಲರಾದ ಅವರು ಕೊಠಡಿಯ ಮೇಲ್ವಿಚಾರಕಿ ಶೀಲಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು ಅವರ ಜಾಗಕ್ಕೆ ಬೇರೊಬ್ಬರನ್ನು ನೇಮಿಸಲಾಯಿತ
ು.
ಐವರು ಬಂಧನ:
ಹಿರೇಕೆರೂರು ಪಟ್ಟಣದಲ್ಲಿ ನಕಲು ಮಾಡಲು ಸಹಕರಿಸಿದ ಆರೋಪದ ಮೇಲೆ ಅವರನ್ನು ಬಂಧಿಸಿ ನಂತರ ಜಾಮೀನು ಅನ್ವಯ ಬಿಡುಗಡೆ ಮಾಡಲಾಗಿದೆ.
ಅಮ್ಮ ಅಗಲಿದ ನೋವು :
ಜೋಯಿಡಾ ತಾಲೂಕಿನ ಕೆಸರ್ಲಾಕ್ ಪ್ರೌಢಶಾಲೆ ವಿದ್ಯಾರ್ಥಿ ನೀಲೇಶ್ ಗಾವ್ಕರ್ ಅವರ ತಾಯಿ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದರು ಪೋಷಕರೊಂದಿಗೆ ಸಮಾಲೋಚಿಸಿದ ನೋಡಲ್ ಅಧಿಕಾರಿ ರಮೇಶ್ ಗುರುನಾಥ್ ಚೌಧರಿಯವರು ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪರೀಕ್ಷೆ ಬರೆಸಿದರು.
ಬೈಕ್ನಲ್ಲಿ ಹೊರಟಿದ್ದಾಗ ಲಾರಿ ಡಿಕ್ಕಿ.
ಬೈಕ್ ಗೆ ಲಾರಿ ಡಿಕ್ಕಿ, ವಿದ್ಯಾರ್ಥಿ ಸಾವು.
ಮೂವರು ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಬೈಕಿನಲ್ಲಿ ತೆರಳುತ್ತಿದ್ದಾಗ ಲಾರಿಗೆ ಡಿಕ್ಕಿ ಹೊಡೆದು ಒಬ್ಬ ಮೃತಪಟ್ಟ ಮುಂಡರಗಿಯ ಬಾಗೇವಾಡಿಯಲ್ಲಿ ನಡೆದಿದೆ ಸಿದ್ದಪ್ಪ ತಳವಾರ ಮೃತ ವಿದ್ಯಾರ್ಥಿ ಲಾರಿ ಟಿಪ್ಪರ್ ಟೇಕ್ ಮಾಡುವ ಭರದಲ್ಲಿ ಡಿಕ್ಕಿಯಾಗಿದೆ.
ವಿದ್ಯಾರ್ಥಿ ಅಸ್ವಸ್ಥ
ಗೋಕಾಕ್ ನಾ ಪಟ್ಟ ಪರೀಕ್ಷೆ ಕೇಂದ್ರದಲ್ಲಿ ವಿದ್ಯಾರ್ಥಿನಿ ಬಾದಾಮಿ ತಾಲೂಕಿನಲ್ಲಿ ಅಲ್ಸರ್ ನಿಂದ ಬಳಲುತ್ತಿದ್ದ ವಿದ್ಯಾರ್ಥಿ ಅಸ್ವಸ್ಥರಾದಾಗ ಅವರಿಗೆ ಕೂಡಲೇ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲಾಯಿತು ಬೈಲಹೊಂಗಲ್ ತಾಲೂಕಿನ ದೊಡ್ಡವಾಡ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ಆರಂಭವಾದ ಗಂಟೆಯಲ್ಲಿ ವಿದ್ಯಾರ್ಥಿಗೆ ಫಿಟ್ಸ್ ಕಾಣಿಸಿಕೊಂಡಿತು .
ಪೋಷಕರಿಗೆ ಲಾಠಿ ರುಚಿ.
ವಿಜಯಪುರದಲ್ಲಿ ಪರೀಕ್ಷೆ ಆರಂಭವಾದ ಬಳಿಕ ಪೋಷಕರು ಸಾಮಾಜಿಕ ಅಂತರ ನಿಯಮಗಳಿಗೆ ಗಾಳಿಗೆ ತೂರಿ ಕೇಂದ್ರದ ಬಳಿ ಗುಂಪಾಗಿ ನಿಂತಿದ್ದ ದೃಶ್ಯಗಳು ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಕಂಡುಬಂತು ಗುಂಪುಗಳನ್ನು ಪೊಲೀಸರು ಚದುರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ