ಜೂಮ್ ಆಪ್ ಬೇಡ|ಜಿಯೋ ಮೀಟ್ ಪರ್ಯಾಯ ದೇಶಿಯ ಆಪ್ ಬಿಡುಗಡೆ |ನಮ್ಮ ದೇಶದ ಜಿಯೋ ಮೀಟ್ ಆಪ್ ಡೌನ್ಲೋಡ್ ಮಾಡ್ಕೊಳ್ಳಿ |ರಿಲಯನ್ಸ್ ಜಿಯೋ ಬಿಡುಗಡೆ ಮಾಡಿದೆ.
ಕೋರೋನಾ ವೈರಸ್ನ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಅದೇ ರೀತಿ ವೇಗವಾಗಿ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿದ್ದು ಜೂಮ್ ಆಪ್ ಅತಿ ಹೆಚ್ಚು ಬಳಕೆಯಲ್ಲಿರುವ ಈ ಅಪ್ಲಿಕೇಶನ್ ಗೆ ಪರ್ಯಾಯವಾಗಿ jio meet ರಿಲಯನ್ಸ್ ಜಿಯೋ ದೇಶಿಯ ಆಪ್ ಬಿಡುಗಡೆ ಮಾಡಿದೆ.
-----------------------------------------------------------
Top PUC College for integrated courses in KALABURAGI .
{ KCET /JEE/NEET/ BSc Agri practical & Veterinary } + Theory.
Our dedicated and subject Expert Team will guide to achieve your Goal.
Get your admission in Advance.. limited seats hurry up! GUARANTEED SUCCESS.
----------------------------------------------------------
ಕೊರೋನಾ ಸಾಂಕ್ರಮಿಕ ದಿಂದಾಗಿ ಮನೆಯಿಂದಲೇ ಕಾರ್ಯನಿರ್ವಹಿಸುವ ಹೊಸ ಅನುಭವ ಬಹುತೇಕ ಉದ್ಯಮಿಗಳಿಗೆ ದೊರೆತಿದೆ, ವಿದ್ಯಾರ್ಥಿಗಳಿಗೆ ಶಿಕ್ಷಕರು ಆನ್ಲೈನ್ ಪಾಠ ಮುಂದುವರಿಸಿದ್ದಾರೆ.
ಕಾರ್ಯಾಚರಣೆಗಾಗಿ ನಡೆಸುವ ಮೀಟಿಂಗ್ ಸೆಮಿನಾರುಗಳಲ್ಲಿ ಈಗ ಜೂಮ್, ಗೂಗಲ್ ಮೀಟ್ ಮತ್ತು skype ಆಪ್ ಗಳ ಮೂಲಕ ವಿಡಿಯೋ ಕಾನ್ಫರೆನ್ಸ್ ನಡೆಸಲಾಗುತ್ತಿದೆ.
ರಿಲಯನ್ಸ್ ಜಿಯೋ ದೇಶಿಯ ಆಪ್ ಪ್ರಯತ್ನ ಮಾಡಿದ್ದೂ ಗಮನಸೆಳೆದಿದೆ ಇದನ್ನು ಪ್ಲೇ ಸ್ಟೋರ್ ನಲ್ಲಿ ಇಂಪ್ಲಿಮೆಂಟ್ ಮಾಡಲಾಗಿದ್ದು ನೀವು ಅದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಕಂಪನಿಯ ಪ್ರಕಾರ ಜಿಯೋ ಮೀಟ್ ಮೂಲಕ ನೂರು ಜನರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಬಹುದು.
ಡೆಸ್ಕಟಾಪ್ ಬಳಕೆದಾರರು ಡೌನ್ಲೋಡ್ ಮಾಡಿಕೊಳ್ಳುವ ಅಗತ್ಯವಿಲ್ಲ. ಇನ್ಸ್ಟಂಟ್ ಲಿಂಕ್ ಮೂಲಕ ಭಾಗಿಯಾಗಬಹುದು.
ಜಿಯೋ ಮೀಟ್ ವಿಡಿಯೋ ಕಾನ್ಫರೆನ್ಸ್ ಇತರ ಆಪ್ ಗಳಿರುವಂತೆ , ಮೀಟಿಂಗ್ ಷೆಡ್ಯೂಲ್, ಸ್ಕ್ರೀನ್ ಶೇರಿಂಗ್ ಸೇರಿದಂತೆ ಆಯ್ಕೆಗಳನ್ನು ಒಳಗೊಂಡಿದೆ. ವಿನ್ಯಾಸ ಬಹುತೇಕ ಜೂಮ್ ಅಪ್ಲಿಕೇಶನ್ಗೆ ಹೋಲಿಕೆ ಆಗಿದೆ.
ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಬಹುದು ಒಬ್ಬರು ಒಂದೇ id ಮೂಲಕ ಮೂಲಕ 5 ಸಾಧನೆಗಳಲ್ಲಿ ಲಾಗಿನ್ ಆಗುವ ಅವಕಾಶವಿದೆ.
ಗರಿಷ್ಠ 100 ಜನರನ್ನು ಒಳಗೊಂಡ ನಿರಂತರ 24 ಗಂಟೆಗಳ ವರೆಗೆ ಮುಂದುವರೆಸಬಹುದು.
===================================
ಜಾಹಿರಾತು :
==================================
ವಿಡಿಯೋ ಕಾಲಿಂಗ್ ಸೇವೆ ಆರಂಭಿಸಿರುವುದಾಗಿ ರಿಲಯನ್ಸ್ ಜಿಯೋ ಎಪ್ರಿಲ್ 30ರಂದು ಪ್ರಕಟಿಸಿತು, ಗೂಗಲ್ ಪ್ಲೇ ಸ್ಟೋರ್ ಪ್ರಕಾರ ಜೂನ್ 30ರಂದು ಆಪ್ ಡೌನ್ಲೋಡ್ ಗೆ ಬಿಡುಗಡೆಯಾಗಿದೆ ಇವರಿಗೆ ಒಂದು ಲಕ್ಷ ಬಾರಿ ಡೌನ್ಲೋಡ್ ಆಗಿದೆ.
ಬಳಕೆದಾರರು 4.5 ರೇಟಿಂಗ್ ಮಾಡಿದ್ದಾರೆ ಆದರೆ ವಿನ್ಯಾಸ ಬದಲಿಸಿಕೊಳ್ಳುವ ಅಗತ್ಯದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಈ ಆಪ್ ಬಳಸಲು ಆಂಡ್ರಾಯ್ಡ್ ವರ್ಷನ್ 5.0 ಹಾಗೂ ಅದಕ್ಕಿಂತ ಮುಂದಿನ ಆಪರೇಟಿಂಗ್ ಸಿಸ್ಟಮ್ ಮತ್ತು ಫೋನ್ ಕನಿಷ್ಠ 2gb RAM ಒಳಗೊಂಡಿರಬೇಕು.
ಐ ಫೋನ್ಗಳಲ್ಲಿ ios 9 ಹಾಗೂ ಅದಕ್ಕಿಂತ ಮುಂದಿನದು ಹಾಗೂ ಕನಿಷ್ಠ 1GB RAM ಇರಬೇಕು. ಲ್ಯಾಪ್ಟಾಪ್ ನ ಬಳಕೆಗೆ ಮೈಕ್ರೋಸಾಫ್ಟ್ ವಿಂಡೋಸ್ 10 ಇರಬೇಕು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ