ಪೋಸ್ಟ್‌ಗಳು

ಆಗಸ್ಟ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Featured Post

BIG NEWS: 'SSLC, PUC ಪರೀಕ್ಷಾ ಅಕ್ರಮ'ದಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದಿ ವಿರುದ್ಧ 'ಕ್ರಿಮನಲ್ ಕೇಸ್': ರಾಜ್ಯ ಸರ್ಕಾರ ಆದೇಶ

SSLC, ದ್ವಿತೀಯ ಪಿಯುಸಿ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಲು ಮತ್ತು ಇಲಾಖಾ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸಂಬಂಧ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ನಿರ್ದೇಶಕರು (ಪರೀಕ್ಷೆಗಳು), ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮ೦ಡಳಿ, ಮಲ್ಲೇಶ್ವರಂ, ಬೆಂಗಳೂರು ಸಂಖ್ಯೆ:ಎ8/ಎಸ್‌ಎಸ್‌ಎಲ್ಸಿ/ಅಕ್ರಮ/44/2019-20ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಒಂದು ಅತ್ಯಂತ ಪ್ರಮುಖ ಘಟ್ಟವಾಗಿರುತ್ತದೆ. ಸದರಿ ಪರೀಕ್ಷೆಯನ್ನು ಯಾವುದೇ ಅವ್ಯವಹಾರ ಆಗದಂತೆ ಪಾರದರ್ಶಕವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಮಂಡಳಿಯು ಎಲ್ಲಾ ರೀತಿಯ ಅಗತ್ಯ ಪೂರ್ವಸಿದ್ಧತೆಗಳೊಂದಿಗೆ ಪರೀಕ್ಷೆಯನ್ನು ನಡೆಸಲು ಕ್ರಮಕೈಗೊಳ್ಳುತ್ತದೆ. ಏತನ್ಮಧ್ಯೆ. ಕೆಲವು ಕಿಡಿಗೇಡಿಗಳು ಪರೀಕ್ಷಾ ಸಮಯದಲ್ಲಿ ಪ್ರಶ್ನೆಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು, ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಲು ಪ್ರಯತ್ನಪಡುವುದು ಈ ತರಹದ ಕಾನೂನು ಬಾಹಿರ ಕೃತ್ಯಗಳನ್ನು ನಡೆಸಲು ಪ್ರಯತ್ನಿಸುವ ಮೂಲಕ ವಿದ್ಯಾರ್ಥಿ/ಪೋಷಕರಲ್ಲಿ ಗೊಂದಲವುಂಟುಮಾಡುವುದು ಮತ್ತು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವುದು ಇವರ ಉದ್ದೇಶವಾಗಿರುತ್ತದೆ. ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಇಲಾಖೆಯು ಅತ್ಯಂತ ಗಂಭೀರವಾಗಿ ಪರಿ...

ಕಸ್ತೂರಿ ರಂಗನ್ ಕ್ರಿಕೆಟಿಗ ನಿಧನ.

ಇಮೇಜ್
  ಕಸ್ತೂರಿ ರಂಗನ್ ಕ್ರಿಕೆಟಿಗ ನಿಧನ. ಬೆಂಗಳೂರು; ಮಾಜಿ ಕ್ರಿಕೆಟ್ ಆಟಗಾರ, ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ನಿರ್ಮಾತೃ, ಜಿ. ಕಸ್ತೂರಿರಂಗನ್‌ ಅವರು ಬುಧವಾರ ಚಾಮರಾಜಪೇಟೆಯಲ್ಲಿರುವ ಅವರ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಕಸ್ತೂರಿ ರಂಗನ್ ಅವರ ಕುಟುಂಬ; ಕಸ್ತೂರಿ ರಂಗನ್ ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಒಬ್ಬಪುತ್ರಿ ಇದ್ದಿರುತ್ತಾರೆ. ಕಸ್ತೂರಿ ರಂಗನ್ ಅವರು 1948 ರಿಂದ 63ರ ವರೆಗೆ ಮೈಸೂರು ರಾಜ್ಯ ತಂಡದಲ್ಲಿ ಅವರು ಮಧ್ಯಮ ವೇಗದ ಬೌಲರ್‌ ಆಗಿದ್ದರು. 1969ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ನಿರ್ಮಾಣದ ಉಸ್ತುವಾರಿ ಸ್ಥಾನಕ್ಕೇರಿದರು. ನಂತರ 2001ರವರೆಗೆ ಅವರೇಕ್ಯುರೇಟರ್‌ ಕೂಡ ಆಗಿದ್ದರು. ಕಸ್ತೂರಿ ರಂಗನ್ ಅವರು ಗುಲಾಬಿ ಹೂವು ತಳಿಗಳ ಅಭಿವೃದ್ಧಿಯಲ್ಲಿಯೂ ತೊಡಗಿಕೊಂಡಿದ್ದರು. ಬೇರೆ ಬೇರೆ ದೇಶಗಳಿಗೆ ಇವರ ತೋಟದಲ್ಲಿ ಬೆಳೆದಿರುವ  ಗುಲಾಬಿ ಹೂವುಗಳು ರಫ್ತಾಗುತ್ತವೆ.

ಆ.27ಕ್ಕೆ GST ಕುರಿತು ಸಭೆ.

ಇಮೇಜ್
  ಆ.27ಕ್ಕೆ GST ಕುರಿತು ಸಭೆ.  ನವದೆಹಲಿ; ಆಗಸ್ಟ್‌ 27ರಂದು ಸರಕು ಮತ್ತು ಸೇವಾತೆರಿಗೆ GST ಮಂಡಳಿಯ ಸಭೆಯು ನಡೆಯುವ ಸಾಧ್ಯತೆ ಇದ್ದು, ರಾಜ್ಯಗಳಿಗೆ ಪರಿಹಾರ ನೀಡುವುದು ಹಾಗೂ ಆದಾಯ ಕೊರತೆಯನ್ನು ತುಂಬಿಕೊಳ್ಳಲು ಮಾರುಕಟ್ಟೆಯಿಂದ ಸಾಲ ಪಡೆಯುವುದರ ಕಾನೂನು ಬಾಧ್ಯತೆಯ ಬಗ್ಗೆ ಅಟಾರ್ನಿ ಜನರಲ್‌ ನೀಡಿರುವ ಅಭಿಪ್ರಾಯದ ಕುರಿತು ಚರ್ಚೆಯಾಗುವ ನಿರೀಕ್ಷೆ ಇದೆ. ರಾಜ್ಯಗಳು GST ಆದಾಯದಲ್ಲಿ ಎದುರಿಸುವ ಕೊರತೆಯನ್ನು ಕೇಂದ್ರವು ತನ್ನ ಖಜಾನೆಯಿಂದ ಭರ್ತಿ ಮಾಡಿಕೊಡಬೇಕು ಎಂದೇನೂ ಇಲ್ಲ ಎನ್ನುವ ಅಭಿಪ್ರಾಯವನ್ನು ಅಟಾರ್ನಿ ಜನರಲ್ ‌ಕೆ.ಕೆ. ವೇಣುಗೋಪಾಲ್ ಅವರು ‌ನೀಡಿದ್ದಾರೆ, ಎಂದು ಮೂಲಗಳಿಂದ ತಿಳಿದುಬಂದಿದೆ. ಆದಾಯದ ಕೊರತೆಯನ್ನುತುಂಬಿಸಿಕೊಳ್ಳಲು ರಾಜ್ಯಗಳು ಮಾರುಕಟ್ಟೆಯಿಂದ ಹಣ ಸಂಗ್ರಹಿಸಬೇಕಾಗಬಹುದು.

ಇನ್ಮುಂದೆ TELEGRAM ನಲ್ಲೂ VIDEOCALL ಬರಲಿದೆ.

ಇಮೇಜ್
  ಇನ್ಮುಂದೆ TELEGRAM ನಲ್ಲೂ VIDEOCALL ಬರಲಿದೆ. ಅತ್ಯಂತ ಸುರಕ್ಷಿತ ಮೆಸೇಜಿಂಗ್‌ ಅಪ್ಲಿಕೇಷನ್‌ ಎಂದೇ ಅನಿಸಕೊಂಡಿರುವ ಟೆಲೆಗ್ರಾಮನಲ್ಲಿ ಇನ್ಮುಂದೆ videocall ಕೂಡ ಬರಲಿದೆ. VIDEOCALL ಬರಲು ಅಗಷ್ಟ 16 ನಂತರ ಬಂದಿರುವ ಅಪಡೇಟ್ ಎನ್ನುವ ಸಂದೇಶ ಎಲ್ಲರು ಅಪಡೇಟ್ ಮಾಡುವ ಮೂಲಕ್ VIDEOCALL ಕೂಡ  ಅಪಡೇಟ್ ಆಗಲಿದೆ. 

9 ವಿಷಯಗಳಲ್ಲಿ ಫೇಲ್ ಆಗಿದ್ದಕ್ಕೆ ಸೃಷ್ಟಿ ಮನನೊಂದು ಆತ್ಮಹತ್ತೆ.

ಇಮೇಜ್
  9 ವಿಷಯಗಳಲ್ಲಿ ಫೇಲ್ ಆಗಿದ್ದಕ್ಕೆ ಸೃಷ್ಟಿ ಮನನೊಂದು ಆತ್ಮಹತ್ತೆ. ದಾವಣಗೆರೆ; ಸರಸ್ವತಿ ನಗರದನಿವಾಸಿ ರಾಜಪ್ಪ ಅವರಪುತ್ರಿ ಸೃಷ್ಟಿ 20 ವರ್ಷದ ವಿದ್ಯಾರ್ಥಿನಿ ಬಿಐಇಟಿಯಲ್ಲಿ BE ವ್ಯಾಸಂಗ ಮಾಡುತ್ತಿದ್ದು, 3 ಹಾಗೂ 4 ನೇ ಸೆಮಿಸ್ಟರ್‌ದ ಪರೀಕ್ಷೆಯ 9 ವಿಷಯಗಳಲ್ಲಿ  ಫೇಲಾಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಮಂಗಳವಾರ ಬೆಳೆಗ್ಗೆ ಟಿ.ವಿ.ಸ್ಟೇಷನ್‌ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ವಿದ್ಯಾರ್ಥಿನಿ ಮನೆಯಲ್ಲಿ ಹೇಳಿದ್ದೇನು? 9 ವಿಷಯಗಳಲ್ಲಿ ಫೇಲ್‌ ಆಗಿದ್ದ ಕಾರಣಕ್ಕೆ ಮನನೊಂದು  ಹೊರಗಡೆ ಹೋಗುತ್ತೇನೆ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಇದರ ಕುರಿತು  ಕೆಟಿಜೆ ನಗರ ಠಾಣೆಗೆ ಪ್ರಕರಣದಾಖಲಾಗಿದೆ.

GULBARGA UNIVERSITY ಯ ವಿಭಾಗ್ ಮುಖ್ಯಸ್ಥರ ಮೇಲೆ ಪ್ರಾಧ್ಯಾಪಕನಿಂದ ಹಲ್ಲೆ.

ಇಮೇಜ್
  GULBARGA UNIVERSITY ಯ ವಿಭಾಗ್ ಮುಖ್ಯಸ್ಥರ ಮೇಲೆ ಪ್ರಾಧ್ಯಾಪಕನಿಂದ ಹಲ್ಲೆ. ಕಲಬುರಗಿ; ಗುಲಬರ್ಗಾ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿದ್ಯಾಸಾಗರ ಅವರ ಮೇಲೆ ಮನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮಾಜಿ ಪ್ರಭಾರ ಕುಲಪತಿ ಪ್ರೊ.ಎಸ್‌.ಕೆ.ಮೇಲಕೇರಿ ಅವರು ಮಂಗಳವಾರ ಹಲ್ಲೆ ನಡೆಸಿದ್ದರು, ಈ ಸಂಬಂಧ ವಿದ್ಯಾಸಾಗರ್‌ ಅವರು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲೆ ಮಾಡಿದ್ದಾರೆ. ಮೇಲಕೇರಿ ಅವರ ಸಂಬಂಧಿ ಸಸ್ಯಶಾಸ್ತ್ರ ವಿಭಾಗದಲ್ಲಿ ಪಿಎಚ್‌.ಡಿ. ಪದವಿಗಾಗಿ ಅರ್ಜಿಸಲ್ಲಿಸಿದ್ದರು. ಆದರೆ ಮೆರಿಟ್‌ ಪಟ್ಟಿಯಲ್ಲಿ ಹೆಸರು ಬಂದಿರಲಿಲ್ಲ. ಆಗ ಪ್ರಭಾರ ಕುಲಪತಿಯಾಗಿದ್ದ ಮೇಲಕೇರಿ ಅವರು ಪಿಎಚ್‌.ಡಿ. ಸೀಟು ಕೊಡುವಂತೆ ಒತ್ತಡಹೇರಿದ್ದರು. ಆದರೆ ನಿಯಮಗಳಲ್ಲಿ ಅವಕಾಶವಿಲ್ಲ ಎಂದು ವಿದ್ಯಾಸಾಗರ್‌ ನಿರಾಕರಿಸಿದ್ದರು. ಇದು ಮೇಲಕೇರಿ ಅವರಸಿಟ್ಟಿಗೆ ಕಾರಣವಾಗಿತ್ತು ಎನ್ನಲಾಗಿದೆ. ಆದಾಗ್ಯೂ ಅದೇ ವಿಭಾಗದಲ್ಲಿ ಎಂ.ಫಿಲ್‌. ಪದವಿಗೆಸೀಟುಸಿಕ್ಕಿತ್ತು. ಆದರೆ, ವಿದ್ಯಾರ್ಥಿ ಪೂರ್ಣಪ್ರಮಾಣದಲ್ಲಿ ಸಂಶೋಧನೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದರೂ ಬೇರೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸಮಾಡುತ್ತಿದ್ದುದರಿಂದ ವಿದ್ಯಾಸಾಗರ್‌ ಅವರು ಶಿಷ್ಯವೇತನದ ಮಂಜೂರಾತಿ ಪತ್ರಕ್ಕೆ ಸಹಿ ಹಾಕಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಮೇಲಕೇರಿ ಅವರು ವಿದ್ಯಾಸಾಗರ್‌ ಅವರ ಕಚೇರಿಗೆ ಬಂದು ವಾಗ್ದಾದ ಮಾಡಿ ವಿದ್ಯಾಸಾಗರ್‌ ಅವರ ಕ...

ಪೌರಕಾರ್ಮಿಕರ ಮಗನಿಗೆ SSLC ಅಲ್ಲಿ ಶೇ.98 ಅಂಕ, DC ಯಿಂದ LAPTOP ವಿತರಿಸಿ ಶುಭಹಾರೈಕೆ.

ಇಮೇಜ್
  ಪೌರಕಾರ್ಮಿಕರ ಮಗನಿಗೆ SSLC ಅಲ್ಲಿ ಶೇ.98 ಅಂಕ, DC ಯಿಂದ LAPTOP ವಿತರಿಸಿ ಶುಭಹಾರೈಕೆ. ಬಳ್ಳಾರಿ; ಸಂಡೂರು ಪುರಸಭೆಯ ಪೌರ ಕಾರ್ಮಿಕರಾದ ಗಿರಿಯಪ್ಪ ಅವರ ಮಗ ಯಾಹನ್ ‌SSLC ಯ ಪರೀಕ್ಷೆಯಲ್ಲಿ ಶೇ 98.88 ಅಂಕಗಳನ್ನು ಪಡೆದಿರುವುದರಿಂದ ಪುರಸಭೆ ಅನುದಾನದಡಿ ಲ್ಯಾಪ್‌ ಟಾಪ್‌ ಅನ್ನು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ನಗರದಲ್ಲಿ ಬುಧವಾರ ವಿತರಣೆ ಮಾಡಿ ಶುಭಹಾರೈಕೆ ನೀಡಿದ್ದಾರೆ. ಈ ಪುರಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್‌ ಬಿ.ಎಸ್‌, ಪುರಸಭೆ ಮುಖ್ಯಾಧಿಕಾರಿ ಎಸ್‌.ಸತ್ಯನಾರಾಯಣರಾವ್ ಪಾಲ್ಗೊಂಡಿದ್ದರು.

ಪ್ರಣವ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ್, ಆಸ್ಪತ್ರೆಯಿಂದ ಹೇಳಿಕೆ.

ಇಮೇಜ್
  ಪ್ರಣವ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ್, ಆಸ್ಪತ್ರೆಯಿಂದ ಹೇಳಿಕೆ. ನವದೆಹಲಿ; ಭಾರತದ ಮಾಜಿ ರಾಹ್ಟ್ರಪತಿಯಾದಂತ ಪ್ರಣವ್ ಮುಖರ್ಜಿ ಅವರಿಗೆ ಶ್ವಾಸಕೋಶದ ಲಕ್ಷಣಗಳು ಕಂಡು ಬಂದಿದ್ದು,  ಆರೋಗ್ಯ ಸ್ಥಿತಿ ಇನ್ನು ಗಂಭೀರವಾಗುತ್ತಿದೆ ಎಂದು ಆಸ್ಪತ್ರೆಯಿಂದ ಬುಧವಾರ ಪ್ರಕಟಣೆ ತಿಳಿದುಬಂದಿದೆ.  ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪ್ರಣವ್‌ ಅವರು ದೆಹಲಿಯ ಅರ್ಮಿ ರಿಸರ್ಚ್‌ ಅ್ಯಂಡ್‌ ರೆಫೆರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಣವ್‌ ಮುಖರ್ಜಿ ಅವರಿಗೆ ವೆಂಟಿಲೇಟರ್‌ ನೆರವಿನೊಂದಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಬಗ್ಗೆ ನಿಗಾವಹಿಸಿದೆ ಎಂದು ವರದಿ ತಿಳಿದು ಬಂದಿದೆ.  ಇದಕ್ಕೂಮುನ್ನ, ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ ಎಂದು ಪ್ರಣವ್‌ ಪುತ್ರ ಅಭಿಜಿತ್‌ ಮುಖರ್ಜಿಟ್ವೀಟ್‌ ಮುಖಾಂತರ ತಿಳಿಸಿದ್ದಾರೆ. ಪ್ರನಾವ್ ಮುಖರ್ಜಿ ಅವರು ತಿಂಗಳ 10ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಕಾರಣ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ತೆಗೆಯಲಾಗಿತ್ತು.ಶಸ್ತ್ರ ಚಿಕಿತ್ಸೆಗೂ ಮುನ್ನ ಪ್ರಣವ್‌ ಅವರಿಗೆ ಕೋವಿಡ್‌-19 ಸೋಂಕು ಉಂಟಾಗಿತ್ತು ಈ ಕುರಿತು ಅವರೇ,ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುನ್ನ ಟ್ವೀಟ್‌ ಮೂಲಕ್ ತಿಳಿಸಿದ್ದಾರೆ.

ಸುಧಾಮೂರ್ತಿಯವರ 70 ನೇ ಜನ್ಮದಿನದ ನೆನಪಿಗಾಗಿ ಪೆಂಗ್ವಿನನಿಂದ್ ಸಣ್ಣ ಕಥೆಗಳ ಪುಸ್ತಕ ಪ್ರಕಟಣೆ.

ಇಮೇಜ್
  ಸುಧಾಮೂರ್ತಿಯವರ 70 ನೇ ಜನ್ಮದಿನದ ನೆನಪಿಗಾಗಿ ಪೆಂಗ್ವಿನನಿಂದ್ ಸಣ್ಣ ಕಥೆಗಳ ಪುಸ್ತಕ ಪ್ರಕಟಣೆ. ನವದೆಹಲಿ; ಇನ್ಫೋಸಿಸ್‌ ಫೌಂಡೇಷನ್‌ ಮುಖ್ಯಸ್ಥೆ, ಲೇಖಕಿ ಸುಧಾಮೂರ್ತಿ ಅವರ70ನೇ ವರ್ಷದ ಜನ್ಮದಿನದ ನೆನಪಿಗಾಗಿ, ಅವರ ಇತ್ತೀಚಿನ ಸಣ್ಣ ಕಥೆಗಳ ಸಂಗ್ರಹದ *ಗ್ರಾಂಡ್‌ಪೇರೆಂಟ್ಸ್‌ - ಬ್ಯಾಗ್‌ ಆಫ್‌ ಬಿಗ್‌ ಸ್ಟೋರಿಸ್‌* ಎಂಬ ಪುಸ್ತಕವನ್ನು ಪ್ರಕಟಿಸುವುದಾಗಿ ದೆಹಲಿಯ ಪೆಂಗ್ವಿನ್‌ ರ್ಯಾಂಡಮ್‌ ಹೌಸ್‌ ಇಂಡಿಯಾ ಸಂಸ್ಥೆ ಬುಧವಾರ ಹೇಳಿದೆ. ಹೊಸ ಪುಸ್ತಕದ ಮುಖಪುಟವನ್ನೂ ಬಿಡುಗಡೆ ಮಾಡಿದ ಪೆಂಗ್ವಿನ್‌ ಪ್ರಕಾಶನ ಸಂಸ್ಥೆ, ಇದು ಸುಧಾಮೂರ್ತಿಯವರ *ಗ್ರ್ಯಾಂಡ್‌ಮಾಸ್‌ಬ್ಯಾಗ್‌ ಆಫ್‌ ಸ್ಟೋರೀಸ್‌* ಪುಸ್ತಕ ಸರಣಿಯ ಮುಂದಿನ ಕೃತಿಯಾಗಿದ್ದು, ನವೆಂಬರ್‌ ತಿಂಗಳಲ್ಲಿ ಬಿಡುಗಡೆ ಆಗುತ್ತೆ ಎಂದು ತಿಳಿದು ಬಂದಿದೆ. ಸುಧಾಮೂರ್ತಿಯವರು ಇಂಗ್ಲಿಷ್‌ ಮತ್ತು ಕನ್ನಡ ಎರಡೂ ಭಾಷೆಯಲ್ಲೂ ಹಲವು ಕಾದಂಬರಿಗಳು, ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೃತಿಗಳು,ಪ್ರವಾಸಿ ಕಥನಗಳು ಮತ್ತು ಸಣ್ಣ ಕಥೆಗಳನ್ನು ಬರೆದಿದ್ದಾರೆ. ಕೆಲವು ಜನಪ್ರಿಯ ಮಕ್ಕಳ ಕಥೆಗಳನ್ನೊಳಗೊಂಡ ಕೃತಿಗಳನ್ನು ಪ್ರಕಟಿಸಲಾಗಿದೆ. ಈಗ ಬರಲಿರುವ ಹೊಸ ಪುಸ್ತಕದಲ್ಲೂ ಅವರ ಬಾಲ್ಯದಲ್ಲಿ ಅಜ್ಜನ ಮನೆಯಲ್ಲಿ ಕೇಳಿದ ಕಥೆಗಳ ಸಂಗ್ರಹವಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಸುಮ್ಮನೆ ಕುಳಿತಿದ್ದಾಗ, ನಾನು 10 ರಿಂದ 12 ವರ್ಷದ ಬಾಲಕಿಯಾಗಿದ್ದಾಗ ಹೇಗಿದ್ದೆ ಎಂದು ಯೋಚಿಸುತ್ತಿದ್ದೆ. ಆ ವಯಸ್ಸಿನಲ್ಲಿ ನಾನು...

ಹಾಂಗಕಾಂಗನಲ್ಲಿ ಏರ ಇಂಡಿಯಾ ವಿಮಾನಗಳಿಗೆ ನಿಷೇಧ.

ಇಮೇಜ್
  ಹಾಂಗಕಾಂಗನಲ್ಲಿ ಏರ ಇಂಡಿಯಾ ವಿಮಾನಗಳಿಗೆ ನಿಷೇಧ. ನವದೆಹಲಿ; ಕೆಲವು ಪ್ರಯಾಣಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟ ಕಾರಣ, ಹಾಂಗ್‌ಕಾಂಗ್‌ ಸರ್ಕಾರ ಆಗಸ್ಟ್‌ ಅಂತ್ಯದವರೆಗೆ ಎಲ್ಲ (ಭಾರತದಿಂದ) ಏರ್‌ ಇಂಡಿಯಾ ವಿಮಾನಗಳ ಹಾರಾಟವನ್ನು ನಿಷೇಧಿಸಿದೆ. ಏರ್‌ ಇಂಡಿಯಾ ವಿಮಾನವೊಂದರಲ್ಲಿ ಹಾಂಕಾಂಗ್‌ಗೆ ಬಂದ ಕೆಲವು ಪ್ರಯಾಣಿಕರಲ್ಲಿ ಕೋವಿಡ್‌ 19 ಸೋಂಕು ಉಂಟಾಗಿತ್ತು, ಉಂಟಾದ ಕಾರಣದಿಂದ ಹಾಂಕಾಂಗಾನ ಸರ್ಕಾರ, ತನ್ನ ದೇಶಕ್ಕೆ ಬರುವ ಎಲ್ಲ ಏರ್‌ ಇಂಡಿಯಾ ವಿಮಾನಗಳ ಹಾರಾಟವನ್ನು ತಡೆಯಲಾಗಿದೆ. ಹಾಂಗ್‌ ಕಾಂಗ್‌ ಸರ್ಕಾರದ ನಿಯಮಗಳ ಪ್ರಕಾರ ಭಾರತದ ಹೊರತುಪಡಿಸಿ, ಬಾಂಗ್ಲಾದೇಶ, ಇಂಡೋನೇಷ್ಯಾ,ಕಜಕಿಸ್ತಾನ್‌, ನೇಪಾಳ, ಪಾಕಿಸ್ತಾನ, ಫಿಲಿಪ್ಟಿನ್ಸ್‌, ದಕ್ಷಿಣ ಆಫ್ರಿಕಾ ಮತ್ತು ಅಮೆರಿಕದಿಂದ ಬರುವಎಲ್ಲ ಪ್ರಯಾಣಿಕರು, ಪ್ರಯಾಣಕ್ಕೆ ಮುನ್ನ ಕೋವಿಡ್ ‌ನೆಗೆಟಿವ್‌ ಇರುವ ವರದಿ ನೀಡುವುದು ಕಡ್ಡಾಯ ಎಂದು ತಿಳಿಸಿದೆ, ಹಾಂಕಾಂಗ್‌ ಸರ್ಕಾರ ಜುಲೈ ತಿಂಗಳಲ್ಲಿ ಪ್ರಕಟಿಸಿದ ಮಾರ್ಗಸೂಚಿ ಪ್ರಕಾರ ಭಾರತದಿಂದ ಬರುವ ಪ್ರಯಾಣಿಕರು 72 ಗಂಟೆಗಳ ಮೊದಲು ಕೋವಿಡ್ ‌ನೆಗೆಟಿವ್‌ ಇರುವ ಪ್ರಮಾಣ ಪತ್ರವನ್ನು ಪಡೆದಿರಬೇಕೆಂದು ಸೂಚಿಸಿದೆ.

ಇಂದು ಮುಂಬೈಗೆ ಬರಲಿದೆ ಜಸರಾಜರವರ್ ಪಾರ್ಥಿವ ಶರೀರ.

ಇಮೇಜ್
  ಇಂದು ಮುಂಬೈಗೆ ಬರಲಿದೆ ಜಸರಾಜರವರ್ ಪಾರ್ಥಿವ ಶರೀರ. ಮುಂಬೈ; ಅಮೆರಿಕದ ನ್ಯೂಜೆರ್ಸಿಯಲ್ಲಿ ಇತ್ತೀಚೆಗೆ ನಿಧನರಾದ ಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ್‌ ಜಸ್‌ರಾಜ್‌ ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ ಮುಂಬೈಗೆ ತರಲಾಗುತ್ತೆ ಎಂದು ಅವರ ಕುಟುಂಬದ ತಿಳಿದು ಬಂದಿದೆ. ಪಂಡಿತ್‌ ಜಸ್‌ರಾಜ್‌ ಅವರ ಪಾರ್ಥಿವ ಶರೀರವನ್ನು ಮುಂಬೈನ ವರ್ಸೊವಾನಿವಾಸದಲ್ಲಿ ಸಂಜೆ ಗಂಟೆವರೆಗೆ ಕುಟುಂಬ ಸದಸ್ಯರ ದರ್ಶನಕ್ಕೆಇಡಲಾಗುವುದು.ನಂತರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳುತಿಳಿಸಿವೆ. ಮೆವಾತಿ ಘರಾನಾದ ಗಾಯಕ ಪಂಡಿತ್‌ ಜಸ್‌ರಾಜ್‌ ಅವರು ಕೊರೊನಾ-ಲಾಕ್‌ಡೌನ್‌ ಘೋಷಣೆಯ ಸಮಯದಲ್ಲಿ ಅಮೆರಿಕದ ನ್ಯೂಜೆರ್ಸಿಯಲ್ಲಿದ್ದರು, ಮತ್ತು ಅಮೆರಿಕದಲ್ಲಿನೇ ನಿಧನ ಹೊಂದಿದ್ದಾರೆ.  

2 ಮಕ್ಕಳು ಮತ್ತು ಪತಿಯನ್ನು ಕೊಂಡು ತಾನುಕೂಡಾ ಆತ್ಮಹತ್ಯಾ ಮಾಡಿಕೊಂಡ ನಾಗಪುರದ ವೈದ್ಯ.

ಇಮೇಜ್
  2 ಮಕ್ಕಳು ಮತ್ತು ಪತಿಯನ್ನು ಕೊಂಡು ತಾನುಕೂಡಾ ಆತ್ಮಹತ್ಯಾ ಮಾಡಿಕೊಂಡ ನಾಗಪುರದ ವೈದ್ಯ. ನಾಗಪುರ;  ಡಾ. ಸುಷ್ಮಾರಾಣೆ, 41 ವರ್ಷದ ವೈದ್ಯರೊಬ್ಬರು ಪತಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳನ್ನು ಕೊಂದಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗಪುರ ನಗರದಲ್ಲಿ ಮಂಗಳವಾರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರ ಪ್ರಕಾರ, ಡಾ. ಸುಷ್ಮಾರಾಣೆ, ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಪತಿ 42 ವರ್ಷದ  ಧೀರಜ್‌  ಮತ್ತು ಅವರ 11 ಮತ್ತು 5 ವರ್ಷದ ಇಬ್ಬರು ಮಕ್ಕಳು ನಾಗಪುರದ ಕೊಠಡಿ ಪ್ರದೇಶದಲ್ಲಿರುವ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಧೀರಜ್‌ ಮತ್ತು ಮಕ್ಕಳ ಮೃತದೇಹಗಳು ಮಾಸ್ಟರ್‌ ಬೆಡ್‌ರೂಂನ ಹಾಸಿಗೆಯ ಮೇಲೆ ಪತ್ತೆಯಾಗಿದ್ದರೆ, ವೈದ್ಯರ ಮೃತದೇಹ ಸೀಲಿಂಗ್‌ ಫ್ಯಾನ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಕೊರಡಿ ಪೊಲೀಸ್‌ ಠಾಣೆಯ ಅಧಿಕಾರಿಗಳು ಹೇಳಿದ್ದಾರೆ. ಅವರೊಂದಿಗೆ ವಾಸವಾಗಿದ್ದ ಮೃತನ 60 ವರ್ಷದ ಚಿಕ್ಕಮ್ಮ ಮಲಗುವ ಕೋಣೆಯಬಾಗಿಲು ಬಡಿದಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಸಾವಿಗೀಡಾಗಿರುವುದು ಬೆಳಕಿಗೆ ಬಂದಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಘಟನಾ ಸ್ಥಳದಿಂದ ಪೊಲೀಸರು,ಎರಡು ಸಿರಿಂಜ್‌ ಮತ್ತು ಡೆತ್‌ನೋಟ್ ‌ಅನ್ನು ತಗೆದುಕೊಂಡಿದ್ದಾರೆ. ಡೆತ್‌ನೋಟ್ ನಲ್ಲಿ  ಸುಷ್ಮಾ ಅವರು ಯಾವುದೋ ವಿಚಾರಕ್ಕೆ ಅಸಮಾಧಾ...

ಟಿಕ್ ಟಾಕ್ ಖರೀದಿಸಲು ಒರಾಕಲ್ ಕಂಪನಿ ಸಿದ್ದ.

ಇಮೇಜ್
  ಟಿಕ್ ಟಾಕ್ ಖರೀದಿಸಲು ಒರಾಕಲ್ ಕಂಪನಿ ಸಿದ್ದ. ವಾಷಿಂಗ್ಟನ್  ಚೀನಾ ಮೂಲದ ಸಾಮಾಜಿಕ ಮಾಧ್ಯಮ ಅ್ಯಪ್‌ ಟಿಕ್‌ಟಾಕ್‌ ಅನ್ನು  ಖರೀದಿಸಲು ಅಮೆರಿಕ ಶಾಖೆಯ ಒರಾಕಲ್‌ ಕಂಪನಿ ಸಿದ್ಧವಾಗಿದೆ, ಎಂದು ಅಮೇರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ. ಟಿಕ್‌ಟಾಕ್‌ನ ಶಾಖೆಯನ್ನು 90 ದಿನಗಳ ಒಳಗಾಗಿ ಮಾರಾಟ ಮಾಡುವಂತೆ ಆದೇಶ ಹೊರಡಿಸಿದ ಬೆನ್ನಲ್ಲೇ ಟ್ರಂಪ್‌ ಅವರಿಂದ ಈ ಹೇಳಿಕೆ ಹೊರಗೆ ಕಾಣಿಸಿಕೊಂಡಿದೆ. ಅಲ್ಲದೇ, ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನಲ್ಲಿ ಟಿಕ್‌ಟಾಕ್‌ನ ಕಾರ್ಯಾಚರಣೆಯನ್ನುವಿಸ್ತರಿಸುವ ಸಂಬಂಧ ಅ್ಯಪ್‌ನ ಮಾತೃ ಸಂಸ್ಥೆ ಬೈಟ್‌ಡಾನ್ಸ್‌ನಲ್ಲಿ ಒರಾಕಲ್‌ ಹೂಡಿಕೆ ಮಾಡಿದೆ. ಈ ಕಾರಣದಿಂದಲೂ ಟ್ರಂಪ್‌ ಹೇಳಿಕೆಗೆ ಮಹತ್ವ ಬಂದಿದೆ.

ಕಸ್ತೂರಿ ರಂಗನ್ ಹಿರಿಯ ಕ್ರಿಕೆಟಿಗ ನಿಧನ.

ಇಮೇಜ್
  ಕಸ್ತೂರಿ ರಂಗನ್ ಹಿರಿಯ ಕ್ರಿಕೆಟಿಗ ನಿಧನ. ಬೆಂಗಳೂರು; ಹಿರಿಯ ಕ್ರಿಕೆಟ್ ಆಟಗಾರ, ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ನಿರ್ಮಾತೃಯಾಗಿರುವ ಕಸ್ತೂರಿ ರಂಗನ್ ಅವರು ತಮ್ಮ 90 ನೇ ವಯಸ್ಸಿನ ವರ್ಷದಲ್ಲಿ, ಬುಧುವಾರ್ ಹೃದಯಾಘಾತ ಕಾರಣದಿಂದ ನಿಧನ ಹೊಂದಿದ್ದಾರೆ .  

ಜಾತ್ರಿಯಲ್ಲಿ ಕಳೆದ ಹುಡುಗ ಕನ್ನಡದಲ್ಲಿ 124 ಅಂಕ ಪಡೆದ.

  ಜಾತ್ರಿಯಲ್ಲಿ ಕಳೆದ ಹುಡುಗ ಕನ್ನಡದಲ್ಲಿ 124 ಅಂಕ ಪಡೆದ. ದಾವಣಗೆರೆ; ಮಗುವಾಗಿರುವಾಗ ಜಾತ್ರೆಯಲ್ಲಿ ಕಳೆದುಕೊಂಡಿದ್ದ ಸ್ವಲ್ಪ ದೊಡ್ಡವನಾದ ಮೇಲೆ ಸಾಕುಮನೆಯಿಂದ ತಪ್ಪಿಸಿಕೊಂಡು ಓಡಿದ್ದ, ದನ ಮೇಯಿಸಿಕೊಂಡಿದ್ದ. ಕೊನೆಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಹುಡುಗ ಈ ಬಾರಿ SSLC  ಪರೀಕ್ಷೆಯ ಕನ್ನಡದಲ್ಲಿ125ಕ್ಕೆ 124 ಅಂಕ ತಗೆದುಕೊಂಡ. ಬಾಲಕರ ಬಾಲಮಂದಿರದಲ್ಲಿ ಇರುವ ಸಚಿನ್‌ ಎಂಬ ಹುಡುಗನೇ SSLC ಪರೀಕ್ಷೆಯು ಹುಬ್ಬೇರಿಸುವಂತೆ ಮಾಡಿದ್ದಾನೆ. ಈತನ ಜತೆಗೆ ಮಾತನಾಡಿದಾಗ ತಂದೆ ತಾಯಿ ಹೇಗಿದ್ದಾರೆ ಎಂಬ ನೆನಪೇ ಇಲ್ಲ ಅಂತ ಹೇಳಿದ. ನನಗೆ 2 3 ವರ್ಷ  ಆಗಿರಬೇಕು, ಆಗ ಬೆಂಗಳೂರಿನ ಯಾವುದೋ ಒಂದು ಜಾತ್ರೆಯಲ್ಲಿ ಕಳೆದು ಹೋಗಿದ್ದೆ. ಆಳುತ್ತಾನಿಂತಿದ್ದ ನನ್ನನ್ನು ಮಾರುತಿ ನಗರದ ಸರೋಜಮ್ಮ-ರಾಮಪ್ಪ ಎಂಬವರು ಕರೆದುಕೊಂಡು ಹೋಗಿದ್ದರು. ಅಲ್ಲಿ ಐದಾರು ವರ್ಷ ಅವರ ಜೊತೆಯಲ್ಲಿದ್ದೆ. ನಾನು ಜಾತ್ರೆಯಲ್ಲಿ ಸಿಕ್ಕಿದವ ಎಂಬುದು ಆ ಮನೆಯಲ್ಲೇ ಮುಂದೆ ನನಗೆ ಗೊತ್ತಾಗಿದ್ದು. ಅಲ್ಲಿ ಇರಲು ನನಗೆ ಇಷ್ಟವಾಗಲಿಲ್ಲ. ಅದಕ್ಕೆ 6 -7  ವರ್ಷಗಳ ಹಿಂದೆ ಒಂದು ದಿನ ರೈಲು ನಿಲ್ದಾಣಕ್ಕೆ ಬಂದು ರೈಲು ಹತ್ತಿಬಿಟ್ಟೆ.ಆ ರೈಲಿನಲ್ಲಿ ಗಿರಿಜಮ್ಮಎಂಬ ಮಹಿಳೆ ನನ್ನ ಜೊತೆ ಮಾತನಾಡಿದರು. ನನ್ನ ಬಗ್ಗೆ ತಿಳಿದುಕೊಂಡು ಅವರು ನನಗೆ ಅವರ ಜೊತೆಯಲ್ಲಿ  ಕರೆದುಕೊಂಡು ಹೋದರು.ಅದು ಹರಿಹರದಲ್ಲಿ ಅವರ ಪರಿಚಯದವರ ಮನೆ.ಅಲ್ಲಿ ನನ್ನನ್ನು ಇರಿಸಿದರು' ಎ...

SSLC ಉತ್ತರ ಪತ್ರಿಕೆ ಬದಲು, ವರದಿ ನೀಡಲು ಶಿಕ್ಷಣ ಸಚಿವ ಸೂಚನೆ.

ಇಮೇಜ್
SSLC ಉತ್ತರ ಪತ್ರಿಕೆ ಬದಲು, ವರದಿ ನೀಡಲು ಶಿಕ್ಷಣ ಸಚಿವ ಸೂಚನೆ. ಬೆಂಗಳೂರು; ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ತರೀಪುರ ಗ್ರಾಮದ ವಿನಾಯಕ ಪ್ರೌಢಶಾಲೆಯ SSLC  ವಿದ್ಯಾರ್ಥಿನಿಯಾದ್  ಅಶ್ವಿನಿ ಅವರ ಉತ್ತರಪತ್ರಿಕೆಗಳು  ಬದಲಾದ ಪ್ರಕರಣ ಕಂಡುಬಂದಿದೆ. ಈ ಘಟನೆ ಬಗ್ಗೆ ಗಂಭೀರವಾಗಿ ಪರಿಗಣನೆ ಮಾಡುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ್ ಎಸ್‌.ಸುರೇಶ್‌ಕುಮಾರ್‌, ಅವರು ಈ ಕುರಿತು ತಕ್ಷಣ ಪರಿಶೀಲಿಸಲು ವರದಿ ನೀಡುವಂತೆ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಈ ಬಾರಿ ಪರೀಕ್ಷೆಯ ಇಂಗ್ಲಿಷ್‌ ವಿಷಯದಲ್ಲಿ 89 ಅಂಕಗಳನ್ನು ಪಡೆದಿರು ವಅಶ್ವಿನಿಗೆ, ಕನ್ನಡದಲ್ಲಿ 125ಕ್ಕೆ ಬರಿ 4 ಅಂಕ  ಬಂದಿವೆ. ಸಮಾಜವಿಜ್ಞಾನದಲ್ಲಿ 7, ಹಿಂದಿ 33, ಗಣಿತ 48 ಮತ್ತು ವಿಜ್ಞಾನದಲ್ಲಿ 51 ಅಂಕಗಳಿದ್ದು,ಪ್ರತಿಭಾವಂತೆ ಎನಿಸಿಕೊಂಡಿದ್ದ ವಿದ್ಯಾರ್ಥಿನಿಗೆ ತೀರಾ ಕಡಿಮೆ ಅಂಕಗಳು ಬಂದಿದ್ದರಿಂದ ಅನುಮಾನಗೊಂಡು ಉತ್ತರ ಪತ್ರಿಕೆಗಳ ನಕಲು ಪ್ರತಿ ನೋಡಿದಾಗ ಉತ್ತರ ಪತ್ರಿಕೆಯ ಹಾಳೆಗಳು ಬದಲಾಗಿರುವುದು ಕಂಡುಬಂದಿದೆ. ತಾಯಿ ಹಾಗೂ ಮಾವನ ಜತೆ ಬೆಂಗಳೂರಿಗೆ ತೆರಳಿ ದೂರು ನೀಡಿರುವ ಅವರು,"ಕನ್ನಡ, ವಿಜ್ಞಾನ ಹಾಗೂ ಹಿಂದಿ ವಿಷಯಗಳ ಉತ್ತರ ಪತ್ರಿಕೆಗಳಲ್ಲಿ, ಮೊದಲ ಪುಟ ಹೊರತು ಪಡಿಸಿ ಎಲ್ಲ ಹಾಳೆಗಳನ್ನು ಬದಲಿಸಲಾಗಿದೆ. ನನ್ನ ಸರಿಯಾದ್ ಉತ್ತರ ಪತ್ರಿಕೆ ಕೊಡಿಸಬೇಕು, ಅವುಗಳ ಮೌಲ್ಯ ಮಾಪನಮಾಡಿಸಿ ಫಲಿತಾಂಶ ಪ್ರಕಟಿಸಬೇಕು ಎಂದ...

ಅಶೋಕ್ ಲಾವಾಸ ಚುನಾವಣಾ ಆಯುಕ್ತ ಹುದ್ದೆಗೆ ರಾಜೀನಾಮೆ.

ಇಮೇಜ್
  ಅಶೋಕ್ ಲಾವಾಸ ಚುನಾವಣಾ ಆಯುಕ್ತ ಹುದ್ದೆಗೆ ರಾಜೀನಾಮೆ. ನವದೆಹಲಿ; ಚುನಾವಣಾ ಆಯುಕ್ತೆ ಅಶೋಕ್‌ ಲವಾಸ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎಡಿಬಿ) ಉಪಾಧ್ಯಕ್ಷರಾಗಿ ನೇಮಕವಾಗುತ್ತಿರುವ ಎಂಬ ಕಾರಣಕ್ಕಾಗಿ ಲವಾಸ ಅವರು ಚುನಾವಣಾ ಆಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆಗಸ್ಟ್‌ 31ಕ್ಕೆ ತನ್ನನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಬೇಕು ಎಂದು ಲವಾಸ ಅವರು ರಾಷ್ಟ್ರಪತಿ ಭವನಕ್ಕೆ ರಾಜೀನಾಮೆ ಸಲ್ಲಿಸಿ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಲಾವಾಸ ಅವರ ು ಸೆಪ್ಟೆಂಬರ್‌ ತಿಂಗಳಲ್ಲಿ ಅವರು ಎಡಿಬಿ ಉಪಾಧ್ಯಕ್ಷ ಹುದ್ದೆಯನ್ನ ು ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ತಿಂಗಳು ಅವರಿಗೆ ಈ ಹುದ್ದೆಯ ಜವಾಬ್ದಾರಿ ಕೊಡಲಾಗಿತ್ತು.

ಸತ್ತ್ಯಾಪಾಲ್ ಮಲ್ಲಿಕ್ ಮೇಘಾಲಯದ್ ರಾಜ್ಯಪಾಲರಾಗಿ ನೇಮಕ್.

ಇಮೇಜ್
  ಸತ್ತ್ಯಾಪಾಲ್ ಮಲ್ಲಿಕ್ ಮೇಘಾಲಯದ್ ರಾಜ್ಯಪಾಲರಾಗಿ ನೇಮಕ್. ನವದೆಹಲಿ. ಗೋವಾದ ರಾಜ್ಯಪಾಲ ಸತ್ಯಪಾಲ್‌ ಮಲ್ಲಿಕ್‌ ಅವರನ್ನು ಮೇಘಾಲಯದ ನೂತನ್ ರಾಜ್ಯಪಾಲರನ್ನಾಗಿ ವರ್ಗಾವಣೆ ಮಾಡಲಾಗಿದೆ. ತಥಾಗತ ರಾಯ್ ಅವರು ಮೇಘಾಲಯದ್  ರಾಜ್ಯಪಾಲರಾಗಿ ಐದು ವರ್ಷಗಳ ಅವಧಿ ಪೂರೈಸಿ ನಿವೃತ್ತಿಯಾಗಿದ್ದಾರೆ, ಅವರ ನಿವೃತ್ತಿ ಸ್ಥಾನಕ್ಕೆ ಸತ್ಯಪಾಲ್‌ ಮಲ್ಲಿಕ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿದು ಬಂದಿದೆ. ಮಹಾರಾಷ್ಟ್ರ ರಾಜ್ಯಪಾಲರಾದ ಭಗತ್‌ಸಿಂಗ್‌ ಕೋಶಿಯಾರಿ ಅವರಿಗೆ ಹೆಚ್ಚುವರಿಯಾಗಿ ಗೋವಾ ರಾಜ್ಯಪಾಲರ ಹುದ್ದೆಯ ಹೊಣೆಗಾರಿಕೆಯನ್ನು ನೀಡಿರುತ್ತಾರೆ.

ಪೋಲೀಸರ ಹತ್ಯೆ ಘಟನೆ, ಮತ್ತೊಬ್ಬ ಆರೋಪಿ ನ್ಯಾಯಾಲಯಕ್ಕೆ ಪ್ರವೇಶ.

ಇಮೇಜ್
  ಪೋಲೀಸರ ಹತ್ಯೆ ಘಟನೆ, ಮತ್ತೊಬ್ಬ ಆರೋಪಿ ನ್ಯಾಯಾಲಯಕ್ಕೆ ಪ್ರವೇಶ. ಉತ್ತರಪ್ರದೇಶ; 8 ಜನರ ಪೊಲೀಸರ ಹತ್ಯೆ ಘಟನೆ ಸಂಬಂಧಿಸಿದಂತೆ ರೌಡಿಶೀಟರ್‌ ವಿಕಾಸ್‌ ದುಬೆಯ ಮತ್ತೊಬ್ಬ ಸಹಚರ ಸೋಮವಾರದಂದು  ನ್ಯಾಯಾಲದಲ್ಲಿ ಶರಣಾಗಿದ್ದಾರೆ.ಈ ಘಟನೆ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬ್ರಜೇಶ್ ‌ಶ್ರೀವಾಸ್ತವ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಸೈನಿ ಎಂಬ ಆರೋಪಿ ಕಾನ್ಪುರದ ದೇಹಾತ್‌ನ ನ್ಯಾಯಾಲಯಕ್ಕೆ ಶರಣಾಗಿದ್ದಾನೆ ಎಂದು ಹೇಳಿದ್ದಾರೆ. ಇವತ್ತಿನ ಘಟನೆಕ್ಕಿಂತ ಮೊದಲು ಜುಲೈ 2 ರಂದು ಬಿಕ್ರು ಗ್ರಾಮದಲ್ಲಿ ನಡೆದ ಪೊಲೀಸರ ಹತ್ಯೆ ಘಟನೆಯಲ್ಲಿ ಕೂಡ ಈತನ ಹೆಸರೂ ಕೇಳಿಬಂದಿತ್ತು. ಅವಾಗಿನಿಂದಲೂ ಉತ್ತರಪ್ರದೇಶದ ವಿಶೇಷ ಕಾರ್ಯಪಡೆ ಮತ್ತು ಕಾನ್ಪುರ ಪೊಲೀಸರು ಗೋವಿಂದಸೈನಿಗಾಗಿ ಶೋಧನೆ ನಡಿಸಿದ್ದಾರೆ.

EMI ಪಾವತಿ ಸಮಯ ವಿಸ್ತರಿಸಿ ಎಂದು AIMTC ಯಿಂದ RBI ಗೇ ಮನವಿ ಕೋರಿಕೆ.

ಇಮೇಜ್
  EMI ಪಾವತಿ ಸಮಯ ವಿಸ್ತರಿಸಿ ಎಂದು AIMTC ಯಿಂದ RBI ಗೇ ಮನವಿ ಕೋರಿಕೆ. ನವದೆಹಲಿ; ಲಾಕ್‌ಡೌನ್ ಆಗಿರೋ ಕಾರಣದಿಂದ ರಸ್ತೆ ಸಾರಿಗೆ ವಲಯವು ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ, ಹೀಗಾಗಿ ಸಾಲದ ಕಂತು ಪಾವತಿಸಲು ಡಿಸೆಂಬರ್‌ 31ರವರೆಗೂ ವಿನಾಯಿತಿ ನೀಡುವಂತೆ ಆಲ್‌ ಇಂಡಿಯಾ ಮೋಟಾರ್ ‌ಟ್ರಾನ್ಸ್‌ಪೋರ್ಟ್ ‌ಕಾಂಗ್ರೆಸ್ AIMTC ಯಿಂದ RBI ಗೇ ಮನವಿ ಮಾಡಲಾಗಿದೆ. ಸಾಲದಕಂತು ಮರುಪಾವತಿ ಮುಂದೂಡಲು ಇದ್ದ ಅವಕಾಶವು ಅಗಷ್ಟ ತಿಂಗಳಿಗೆ ಅಂತ್ಯವಾಗಲಿದೆ, ಹೀಗಾಗಿ ಅದನ್ನು ಇನ್ನಷ್ಟು  ದಿನ ವಿಸ್ತರಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಕೊರೊನಾ ನಿಯಂತ್ರಿಸಲು ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾಗಿ ರಸ್ತೆ ಸಾರಿಗೆ ವಲಯ ಅತಿ ಹೆಚ್ಚಿನ ನಷ್ಟ ಅನುಭವಿಸಲಾಗಿದೆ. ಪ್ರಸ್ತಕ ಹಣಕಾಸು ವರ್ಷದಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ಅತಿ ಕಡಿಮೆ.ಈ ವಲಯದ ಆರ್ಥಿಕ ಬಿಕ್ಕಟ್ಟಿನಿಂದಾಗಿ ನೇರ ಮತ್ತು ಪರೋಕ್ಷವಾಗಿ 20 ಕೋಟಿ ಜನರಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಆರ್‌ಬಿಐ ಗವರ್ನರ್‌ ಅವರಿಗೆ ಬರೆದಿರುವ ಪತ್ರದಲ್ಲಿ AIMTC ಹೇಳಿದೆ. ಬೇಡಿಕೆ ಕಡಿಮೆ ಆಗಿರುವುದು ಮತ್ತು ಒಂದು ರಾಜ್ಯದಿಂದ ಇನ್ನೊಂದುರಾಜ್ಯಕ್ಕೆ ಸರಕು ಸಾಗಿಸಿದರೆ ಹಿಂದಿರುಗುವಾಗಖಾಲಿ ಬರಬೇಕಾಗಿರುವುದರಿಂದ ರಾಜ್ಯಗಳ ಮಧ್ಯೆ ಲಾರಿ ಸಂಚಾರಿ ಕಡಿಮೆಯಾಗುತ್ತಿದೆ.ಸರಕು ಮತ್ತು ಪ್ರಯಾಣಿಕ ಉದ್ದೇಶದ ವಾಹನಗಳನ್ನು ಹೊಂದಿರುವ ಸಣ್ಣ ಪ್ರಮಾಣದ ಉದ್ದಿಮೆಗಳು ಹೆಚ್ಚಿನ ಸಂಕಷ್ಟದಲ್...

ಬಾಹುಬಲಿ ನಂತರ ಮತ್ತೆ ರಾಮನ್ ಅವತಾರಕ್ಕೆ ಸಜ್ಜಾದ ಪ್ರಭಾಸ್.

ಇಮೇಜ್
  ಬಾಹುಬಲಿ ನಂತರ ಮತ್ತೆ ರಾಮನ್ ಅವತಾರಕ್ಕೆ ಸಜ್ಜಾದ ಪ್ರಭಾಸ್. ನಟ ಪ್ರಭಾಸ್‌ *ರಾಧೆ ಶ್ಯಾಮ್‌* ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಇದನ್ನು ನಿರ್ದೇಶಿಸುತ್ತಿರುವವರು ರಾಧಾ ಕೃಷ್ಣಕುಮಾರ್‌.  ಮತ್ತು ಪೂಜಾ ಹೆಗ್ಡೆ ಇದರ ನಾಯಕಿಯಾಗಿರುತ್ತಾರೆ. ಇದರ್ ನಂತರ ಪೂಜಾ ಹೆಗ್ಡೆ ಅವರು *ಮಹಾನಟಿ* ಚಿತ್ರದ ಖ್ಯಾತಿಯ ನಾಗ್‌ ಅಶ್ವಿನ್‌ ನಿರ್ದೇಶನದ ಹೊಸಚಿತ್ರದಲ್ಲಿ ನಟಿಸುವುದು ಖಚಿತವಾಗಿದೆ.ಇದರ ನಡುವೆಯೇ ಪ್ರಭಾಸ್‌ ನಟನೆಯ ಹೊಸಚಿತ್ರ *ಆದಿಪುರುಷ* ಎಂಬುದು ಘೋಷಣೆಯಾಗಿದೆ. *ತಾನಾಜಿ* ಚಿತ್ರದ ಖ್ಯಾತಿಯ ಓಂ ರಾವುತ್‌ ಅವರು *ಆದಿಪುರುಷ* ಕ್ಕೆ ಅ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. *ಆದಿಪುರುಷ* ಎಂಬ ಸಿನಿಮಾ ಹಿಂದಿ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಲಿದೆ.ಹಿಂದಿ ಮತ್ತು ತೆಲುಗಿನಲ್ಲಿ ನಿರ್ಮಾಣವಾದಮೇಲೆ ಇನ್ನುಳಿದ ತಮಿಳು, ಮಲಯಾಳ,ಕನ್ನಡ ಸೇರಿದಂತೆ ಹಲವು ವಿದೇಶಿ ಭಾಷೆಗಳಿಗೂ ಡಬ್‌ ಆಗಲಿದೆ.  *ಆದಿಪುರುಷ* ಎಂಬ ಸಿನಿಮಾ 2022ಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ. *ಆದಿಪುರುಷ* ಎಂಬ ಸಿನಿಮಾ 3ಡಿ ತಂತ್ರಜ್ಞಾನದಡಿಯಲ್ಲಿ ಕೂಡ ನಿರ್ಮಾಣವಾಗುತ್ತಿದೆ, ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಸವಾಲುಗಳಿರುತ್ತವೆ. ಆದರೆ, ಆದಿಪುರುಷ್‌ ಸಿನಿಮಾದಂತಹ ಪಾತ್ರ ನಿಭಾಯಿಸುವಾಗಜವಾಬ್ದಾರಿ ಬಹಳದೊಡ್ಡ ಪ್ರಮಾಣದಲ್ಲಿರುತ್ತೆ. ಪ್ರಭಾಸನ್ *ಆದಿಪುರುಷ* ಎಂಬ ಸಿನಿಮಾದ್ ಬಗ್ಗೆ ಪ್ರತಿಕ್ರಿಯೆ ಏನಿರುತ್ತೆ? ಓಂ ರಾವುತ್‌ ಅವರವಿನ...

ಅ.4ರಂದು ಶಿಕ್ಷಕರ ಅರ್ಹತಾ ( TET ) ಪರೀಕ್ಷೆ, ಶಿಕ್ಷಣ ಸಚಿವ ಹೇಳಿಕೆ.

ಇಮೇಜ್
  ಅ.4ರಂದು ಶಿಕ್ಷಕರ ಅರ್ಹತಾ ( TET ) ಪರೀಕ್ಷೆ, ಶಿಕ್ಷಣ ಸಚಿವ ಹೇಳಿಕೆ. ಬೆಂಗಳೂರು; ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಅಕ್ಟೋಬರ್ 4ರಂದು ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ು ಹೇಳಿದ್ದಾರೆ. ಕೊರೊನಾ ಎಂಬ ವೈರಸ ಸೋಂಕು ಹರಡುತ್ತಿರುವ ಕಾರಣದಿಂದ ಎಲ್ಲ ಅಗತ್ಯ ಸುರಕ್ಷತಾ  ಕ್ರಮಗಳನ್ನು ಅನುಸರಿಸಿ ಪರೀಕ್ಷೆ ನಡೆಸಲಾಗುವುದು.ಈ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಅಧಿಕಾರಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಈಗಾಗಲೇ ಸೂಚನೆ ನೀಡಿದ್ದಾರೆ. ಅಭ್ಯರ್ಥಿಗಳು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

NEET JEE ಪರೀಕ್ಷೆ ಸೆಪ್ಟೆಂಬರನಲ್ಲಿ, ಸುಪ್ರೀಂಕೋರ್ಟ್ ಹೇಳಿದೆ.

ಇಮೇಜ್
  NEET JEE ಪರೀಕ್ಷೆ ಸೆಪ್ಟೆಂಬರನಲ್ಲಿ, ಸುಪ್ರೀಂಕೋರ್ಟ್ ಹೇಳಿದೆ. ನವದೆಹಲಿ; ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರಮಟ್ಟದಲ್ಲಿ ನಡೆಯುವ ಜಂಟಿ ಪ್ರವೇಶ ಪರೀಕ್ಷೆ (JEE ) ಮತ್ತು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗಳು (NEET‌) ನಿಗದಿತ ದಿನಗಳಂದು ನಡೆಯಲಿವೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ತಿಳಿಸಿದೆ. ಕೊರೊನಾ ವೈರಸ್‌ ಪರಿಣಾಮ ಹಿನ್ನಲೆ ನೀಟ್‌, ಜೆಇಇ ಪರೀಕ್ಷೆಗಳನ್ನು ಮುಂದೂಡುವಂತೆ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸ್ವೀಕರಿಸಿಲ್ಲ.NEET ಮತ್ತು JEE  ಪರೀಕ್ಷೆ ಮುಂದೂಡುವಂತೆ 11 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು, ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಪರೀಕ್ಷೆ ಮುಂದೂಡಲು ಸಾಧ್ಯವಿಲ್ ಲ ಎಂದು ನಿರಾಕರಿಸಿದ್ದಾರೆ. ನಿಗದಿಯಂತೆ ಸೆಪ್ಟೆಂಬರ್‌ ತಿಂಗಳಲ್ಲಿ ನೀಟ್‌, ಜೆಇಇ ಪರೀಕ್ಷೆಗಳು ನಡೆಯಲಿವೆ ಎಂದು ತ್ರಿಸದಸ್ಯ ಪೀಠ ತಿಳಿಸಿದೆ. ಯುವ ಜನರ ಬದುಕನ್ನು ಕಷ್ಟಕ್ಕೆ ಸಿಲುಕಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಅಗಷ್ಟ 20 ರಂದು CET ಫಲಿತಾಂಶ, ಎಂದು ಡಾ.ಸಿ.ಎನ್.ಅಶ್ವಥನಾರಾಯಣ ಹೇಳಿಕೆ.

ಇಮೇಜ್
  ಅಗಷ್ಟ 20 ರಂದು CET ಫಲಿತಾಂಶ, ಎಂದು ಡಾ.ಸಿ.ಎನ್.ಅಶ್ವಥನಾರಾಯಣ ಹೇಳಿಕೆ. ಬೆಂಗಳೂರು; ಅಗಷ್ಟ ತಿಂಗಳದ 20 ನೇ ದಿನಾಂಕದಂದು ಸಾಮಾನ್ಯ ಪ್ರವೇಶ ಪರೀಕ್ಷೆ (CET) ಫಲಿತಾಂಶ ತಿಳಿಸಲಾಗುತ್ತದೆ. ಮತ್ತು   ಕೂರೋನಾ ಎಂಬ ಸೋಂಕು ಹರಡುತ್ತಿರುವದು,‌ಹಾಗು ಪ್ರವಾಹ ಸಂಕಷ್ಟದ ಕಾರಣ ಎಂಜಿನಿಯರಿಂಗ್‌ ಸೀಟುಗಳ ಹಂಚಿಕೆ ಅನುಪಾತ ಮತ್ತು ಶುಲ್ಕ ಸ್ವರೂಪ ಕಳೆದ ವರ್ಷದಂತೆಯೇ ಈ ವರ್ಷವೂ ಮುಂದುವರಿಯಲಿದೆ ಎಂದು ಉನ್ನತ ಶಿಕ್ಷಣ ಸಚಿವರಾದ, ಉಪಮುಖ್ಯಮಂತ್ರಿ, ಡಾ.ಸಿ.ಎನ್‌.ಅಶ್ವತ್ವನಾರಾಯಣ ಹೇಳಿದ್ದಾರೆ. ಎಂಜಿನಿಯರಿಂಗ್‌ ಸೀಟುಗಳ ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಕಾಮೆಡ್‌-ಕೆ, ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸಂಘ ಹಾಗೂ ರಾಜ್ಯ ಧಾರ್ಮಿಕ ಅಲ್ಪಸಂಖ್ಯಾತ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸಂಘದ ಪ್ರತಿನಿಧಿಗಳ ಜೊತೆ  ಉಪಮುಖ್ಯಮಂತ್ರಿ, ಡಾ.ಸಿ.ಎನ್‌.ಅಶ್ವತ್ವನಾರಾಯಣ ಸೋಮವಾರ ಸಭೆ ನಡೆಸಿದ ಬಳಿಕ ಮಾತನಾಡಿದರು. 45:30:25 ಅನುಪಾತ: ಎಂಜಿನಿಯರಿಂಗ್‌ ಕಾಲೇಜುಗಳು ಶೇ 45ರಷ್ಟು ಸೀಟುಗಳನ್ನು ಸರ್ಕಾರಕ್ಕೆ ನೀಡಿದರೆ, ಶೇ 30ರಷ್ಟು ಸೀಟುಗಳನ್ನು ಕಾಮೆಡ್‌ ಕೆಗೆ ಹಂಚಿಕೆ ಮಾಡಲಾಗುತ್ತದೆ. ಶೇ 25ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರು, ಆಡಳಿತ ಮಂಡಳಿ ಕೋಟಾಗೆ ಮೀಸಲಿಡಲಾಗಿದೆ. ಇನ್ನು ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಕ್ರಮವಾಗಿ ಶೇಕಡಾ 40:30:30ರ ಅನುಪಾತದಲ್ಲಿ ಸೀಟು ಹಂಚಿಕೆ ಮಾಡಲಾಗಿದೆ...