Featured Post
2 ಮಕ್ಕಳು ಮತ್ತು ಪತಿಯನ್ನು ಕೊಂಡು ತಾನುಕೂಡಾ ಆತ್ಮಹತ್ಯಾ ಮಾಡಿಕೊಂಡ ನಾಗಪುರದ ವೈದ್ಯ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
2 ಮಕ್ಕಳು ಮತ್ತು ಪತಿಯನ್ನು ಕೊಂಡು ತಾನುಕೂಡಾ ಆತ್ಮಹತ್ಯಾ ಮಾಡಿಕೊಂಡ ನಾಗಪುರದ ವೈದ್ಯ.
ನಾಗಪುರ;
ಡಾ. ಸುಷ್ಮಾರಾಣೆ, 41 ವರ್ಷದ ವೈದ್ಯರೊಬ್ಬರು ಪತಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳನ್ನು ಕೊಂದಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗಪುರ ನಗರದಲ್ಲಿ ಮಂಗಳವಾರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಡಾ. ಸುಷ್ಮಾರಾಣೆ, ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಪತಿ 42 ವರ್ಷದ ಧೀರಜ್ ಮತ್ತು ಅವರ 11 ಮತ್ತು 5 ವರ್ಷದ ಇಬ್ಬರು ಮಕ್ಕಳು ನಾಗಪುರದ ಕೊಠಡಿ ಪ್ರದೇಶದಲ್ಲಿರುವ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಧೀರಜ್ ಮತ್ತು ಮಕ್ಕಳ ಮೃತದೇಹಗಳು ಮಾಸ್ಟರ್ ಬೆಡ್‌ರೂಂನ ಹಾಸಿಗೆಯ ಮೇಲೆ ಪತ್ತೆಯಾಗಿದ್ದರೆ, ವೈದ್ಯರ ಮೃತದೇಹ ಸೀಲಿಂಗ್ ಫ್ಯಾನ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಕೊರಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಹೇಳಿದ್ದಾರೆ.
ಅವರೊಂದಿಗೆ ವಾಸವಾಗಿದ್ದ ಮೃತನ 60 ವರ್ಷದ ಚಿಕ್ಕಮ್ಮ ಮಲಗುವ ಕೋಣೆಯಬಾಗಿಲು ಬಡಿದಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಸಾವಿಗೀಡಾಗಿರುವುದು ಬೆಳಕಿಗೆ ಬಂದಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನಾ ಸ್ಥಳದಿಂದ ಪೊಲೀಸರು,ಎರಡು ಸಿರಿಂಜ್ ಮತ್ತು ಡೆತ್‌ನೋಟ್ ಅನ್ನು ತಗೆದುಕೊಂಡಿದ್ದಾರೆ. ಡೆತ್‌ನೋಟ್ ನಲ್ಲಿ ಸುಷ್ಮಾ ಅವರು ಯಾವುದೋ ವಿಚಾರಕ್ಕೆ ಅಸಮಾಧಾನಗೊಂಡಿದ್ದರಿಂದಾಗಿ ಈ ರೀತಿಯ ಹೆಜ್ಜೆಯನ್ನು ಇಟ್ಟಿರುವುದಾಗಿ ಹೇಳಿದ್ದಾರೆ, ಎಂದು ತಿಳಿಸಿದರು.
ಪ್ರಾಥಮಿಕ ತನಿಖೆಯ ಪ್ರಕಾರ,ಸುಷ್ಮಾ ಅವರು ಮೊದಲಿಗೆ ಪತಿ ಮತ್ತು ಮಕ್ಕಳಿಗೆ ಪ್ರಜ್ಞೆ ತಪ್ಪುವಂತೆ ಮಾಡಲು ಆಹಾರದಲ್ಲಿ ಕೆಲವು ನಿದ್ರಾಜನಕ ಔಷಧವನ್ನು ಬೆರೆಸಿ. ನೀಡಿದ್ದಿರಬಹುದು ಮತ್ತು ಬಳಿಕ ಅವರಿಗೆ ಇಂಜೆಕ್ಷನ್ ನೀಡಿರಬಹುದು ಎನ್ನಲಾಗಿದೆ.
ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ