Featured Post
ಹಾಂಗಕಾಂಗನಲ್ಲಿ ಏರ ಇಂಡಿಯಾ ವಿಮಾನಗಳಿಗೆ ನಿಷೇಧ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಹಾಂಗಕಾಂಗನಲ್ಲಿ ಏರ ಇಂಡಿಯಾ ವಿಮಾನಗಳಿಗೆ ನಿಷೇಧ.
ನವದೆಹಲಿ;
ಕೆಲವು ಪ್ರಯಾಣಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟ ಕಾರಣ, ಹಾಂಗ್‌ಕಾಂಗ್ ಸರ್ಕಾರ ಆಗಸ್ಟ್ ಅಂತ್ಯದವರೆಗೆ ಎಲ್ಲ (ಭಾರತದಿಂದ) ಏರ್ ಇಂಡಿಯಾ ವಿಮಾನಗಳ ಹಾರಾಟವನ್ನು ನಿಷೇಧಿಸಿದೆ.
ಏರ್ ಇಂಡಿಯಾ ವಿಮಾನವೊಂದರಲ್ಲಿ ಹಾಂಕಾಂಗ್‌ಗೆ ಬಂದ ಕೆಲವು ಪ್ರಯಾಣಿಕರಲ್ಲಿ ಕೋವಿಡ್ 19 ಸೋಂಕು ಉಂಟಾಗಿತ್ತು, ಉಂಟಾದ ಕಾರಣದಿಂದ ಹಾಂಕಾಂಗಾನ ಸರ್ಕಾರ, ತನ್ನ ದೇಶಕ್ಕೆ ಬರುವ ಎಲ್ಲ ಏರ್ ಇಂಡಿಯಾ ವಿಮಾನಗಳ ಹಾರಾಟವನ್ನು ತಡೆಯಲಾಗಿದೆ.
ಹಾಂಗ್ ಕಾಂಗ್ ಸರ್ಕಾರದ ನಿಯಮಗಳ ಪ್ರಕಾರ ಭಾರತದ ಹೊರತುಪಡಿಸಿ, ಬಾಂಗ್ಲಾದೇಶ, ಇಂಡೋನೇಷ್ಯಾ,ಕಜಕಿಸ್ತಾನ್, ನೇಪಾಳ, ಪಾಕಿಸ್ತಾನ, ಫಿಲಿಪ್ಟಿನ್ಸ್, ದಕ್ಷಿಣ ಆಫ್ರಿಕಾ ಮತ್ತು ಅಮೆರಿಕದಿಂದ ಬರುವಎಲ್ಲ ಪ್ರಯಾಣಿಕರು, ಪ್ರಯಾಣಕ್ಕೆ ಮುನ್ನ ಕೋವಿಡ್ ನೆಗೆಟಿವ್ ಇರುವ ವರದಿ ನೀಡುವುದು ಕಡ್ಡಾಯ ಎಂದು ತಿಳಿಸಿದೆ, ಹಾಂಕಾಂಗ್ ಸರ್ಕಾರ ಜುಲೈ ತಿಂಗಳಲ್ಲಿ ಪ್ರಕಟಿಸಿದ ಮಾರ್ಗಸೂಚಿ ಪ್ರಕಾರ ಭಾರತದಿಂದ ಬರುವ ಪ್ರಯಾಣಿಕರು 72 ಗಂಟೆಗಳ ಮೊದಲು ಕೋವಿಡ್ ನೆಗೆಟಿವ್ ಇರುವ ಪ್ರಮಾಣ ಪತ್ರವನ್ನು ಪಡೆದಿರಬೇಕೆಂದು ಸೂಚಿಸಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ