Featured Post
ಪ್ರಣವ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ್, ಆಸ್ಪತ್ರೆಯಿಂದ ಹೇಳಿಕೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪ್ರಣವ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ್, ಆಸ್ಪತ್ರೆಯಿಂದ ಹೇಳಿಕೆ.
ನವದೆಹಲಿ;
ಭಾರತದ ಮಾಜಿ ರಾಹ್ಟ್ರಪತಿಯಾದಂತ ಪ್ರಣವ್ ಮುಖರ್ಜಿ ಅವರಿಗೆ ಶ್ವಾಸಕೋಶದ ಲಕ್ಷಣಗಳು ಕಂಡು ಬಂದಿದ್ದು, ಆರೋಗ್ಯ ಸ್ಥಿತಿ ಇನ್ನು ಗಂಭೀರವಾಗುತ್ತಿದೆ ಎಂದು ಆಸ್ಪತ್ರೆಯಿಂದ ಬುಧವಾರ ಪ್ರಕಟಣೆ ತಿಳಿದುಬಂದಿದೆ.
ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪ್ರಣವ್ ಅವರು ದೆಹಲಿಯ ಅರ್ಮಿ ರಿಸರ್ಚ್ ಅ್ಯಂಡ್ ರೆಫೆರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಣವ್ ಮುಖರ್ಜಿ ಅವರಿಗೆ ವೆಂಟಿಲೇಟರ್ ನೆರವಿನೊಂದಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಬಗ್ಗೆ ನಿಗಾವಹಿಸಿದೆ ಎಂದು ವರದಿ ತಿಳಿದು ಬಂದಿದೆ.
ಇದಕ್ಕೂಮುನ್ನ, ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ ಎಂದು ಪ್ರಣವ್ ಪುತ್ರ ಅಭಿಜಿತ್ ಮುಖರ್ಜಿಟ್ವೀಟ್ ಮುಖಾಂತರ ತಿಳಿಸಿದ್ದಾರೆ.
ಪ್ರನಾವ್ ಮುಖರ್ಜಿ ಅವರು ತಿಂಗಳ 10ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಕಾರಣ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ತೆಗೆಯಲಾಗಿತ್ತು.ಶಸ್ತ್ರ ಚಿಕಿತ್ಸೆಗೂ ಮುನ್ನ ಪ್ರಣವ್ ಅವರಿಗೆ ಕೋವಿಡ್-19 ಸೋಂಕು ಉಂಟಾಗಿತ್ತು ಈ ಕುರಿತು ಅವರೇ,ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುನ್ನ ಟ್ವೀಟ್ ಮೂಲಕ್ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ