Featured Post
EMI ಪಾವತಿ ಸಮಯ ವಿಸ್ತರಿಸಿ ಎಂದು AIMTC ಯಿಂದ RBI ಗೇ ಮನವಿ ಕೋರಿಕೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
EMI ಪಾವತಿ ಸಮಯ ವಿಸ್ತರಿಸಿ ಎಂದು AIMTC ಯಿಂದ RBI ಗೇ ಮನವಿ ಕೋರಿಕೆ.
ನವದೆಹಲಿ;
ಲಾಕ್‌ಡೌನ್ ಆಗಿರೋ ಕಾರಣದಿಂದ ರಸ್ತೆ ಸಾರಿಗೆ ವಲಯವು ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ, ಹೀಗಾಗಿ ಸಾಲದ ಕಂತು ಪಾವತಿಸಲು ಡಿಸೆಂಬರ್ 31ರವರೆಗೂ ವಿನಾಯಿತಿ ನೀಡುವಂತೆ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ AIMTC ಯಿಂದ RBI ಗೇ ಮನವಿ ಮಾಡಲಾಗಿದೆ.
ಸಾಲದಕಂತು ಮರುಪಾವತಿ ಮುಂದೂಡಲು ಇದ್ದ ಅವಕಾಶವು ಅಗಷ್ಟ ತಿಂಗಳಿಗೆ ಅಂತ್ಯವಾಗಲಿದೆ, ಹೀಗಾಗಿ ಅದನ್ನು ಇನ್ನಷ್ಟು
ದಿನ ವಿಸ್ತರಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಕೊರೊನಾ ನಿಯಂತ್ರಿಸಲು ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾಗಿ ರಸ್ತೆ ಸಾರಿಗೆ ವಲಯ ಅತಿ ಹೆಚ್ಚಿನ ನಷ್ಟ ಅನುಭವಿಸಲಾಗಿದೆ. ಪ್ರಸ್ತಕ ಹಣಕಾಸು ವರ್ಷದಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ಅತಿ ಕಡಿಮೆ.ಈ ವಲಯದ ಆರ್ಥಿಕ ಬಿಕ್ಕಟ್ಟಿನಿಂದಾಗಿ ನೇರ ಮತ್ತು ಪರೋಕ್ಷವಾಗಿ 20 ಕೋಟಿ ಜನರಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಆರ್‌ಬಿಐ ಗವರ್ನರ್ ಅವರಿಗೆ ಬರೆದಿರುವ ಪತ್ರದಲ್ಲಿ AIMTC ಹೇಳಿದೆ.
ಬೇಡಿಕೆ ಕಡಿಮೆ ಆಗಿರುವುದು ಮತ್ತು ಒಂದು ರಾಜ್ಯದಿಂದ ಇನ್ನೊಂದುರಾಜ್ಯಕ್ಕೆ ಸರಕು ಸಾಗಿಸಿದರೆ ಹಿಂದಿರುಗುವಾಗಖಾಲಿ ಬರಬೇಕಾಗಿರುವುದರಿಂದ ರಾಜ್ಯಗಳ ಮಧ್ಯೆ ಲಾರಿ ಸಂಚಾರಿ ಕಡಿಮೆಯಾಗುತ್ತಿದೆ.ಸರಕು ಮತ್ತು ಪ್ರಯಾಣಿಕ ಉದ್ದೇಶದ ವಾಹನಗಳನ್ನು ಹೊಂದಿರುವ ಸಣ್ಣ ಪ್ರಮಾಣದ ಉದ್ದಿಮೆಗಳು ಹೆಚ್ಚಿನ ಸಂಕಷ್ಟದಲ್ಲಿದ್ದಾರೆ, ಎಂದು AIMTC ಅಧ್ಯಕ್ಷರಾದಂತ ಕುಲ್‌ತರಾನಾಸಿಂಗ್ ಅತ್ವಾಲ್‌ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ